ಜಾಲಹಳ್ಳಿ: ಪಟ್ಟಣ ಹಾಗೂ ಸುತ್ತಮತ್ತಲ್ಲಿನ ಗ್ರಾಮಗಳ ಭಕ್ತರ ಪ್ರಸಿದ್ದ ದೇವತೆ ಉತ್ತಿನ ಎಲ್ಲಮ್ಮನ ಜಾತ್ರೆ ಯನ್ನು ಡಿ.17ರಂದು ವಿಜೃಂಭಣೆಯಿಂದ ಜರುಗಲಿದೆ.

ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿರುವ ಎಲ್ಲಮ್ಮ ದೇವತೆಯ ಮೂಲ ದೇವಸ್ಥಾನದಿಂದ ಹಂಪರಗುಂದಿ ಸೀಮಾಂತದಲ್ಲಿರುವ ಜಾತ್ರೆ ನಡೆಯುವ ದೇವಸ್ಥಾನಕ್ಕೆ ತಲುಪಿತ ನಂತರವಷ್ಟೇ ಜಾತ್ರೆಯ ಆರಂಭಗೊಳ್ಳುತ್ತದೆ.
ಅಲ್ಲಿಯವರೆಗೂ ಭಕ್ತರು ಉಪವಾಸ ಇರುತತಾರೆ. ಪಲ್ಲಕ್ಕಿ ಬರುವವರೆಗೂ ದೇವತೆಗೆ ತರುವ ನೈವೇದ್ಯ ಹಾಗೂ ಕಾಣಿಕೆಗಳನ್ನು ಅರ್ಪಿಸುವುದಿಲ್ಲ.

ಈ ಜಾತ್ರೆಗೆ ವಿಶೇಷವಾಗಿ ಭಕ್ತರು ಎಳ್ಳು ಹಚ್ಚಿದ ರೊಟ್ಟಿ, ಬದನೆ ಕಾಯಿ ಪಲ್ಯ, ಬುತ್ತಿ ತಂದು ದೇವತೆಗೆ ಪೂಜೆ ಸಲ್ಲಿಸಿದ ನಂತರ ಊಟ ಮಾಡಿ ಹೋಗುವ ವಾಡಿಕೆಯಿದೆ.

ಇನ್ನೊಂದು ವಿಶೇಷತೆ ಎಂದರೆ ಈ ಜಾತ್ರೆ ಕೇವಲ ಒಂದು ದಿನ ನಡೆಯುತ್ತದೆ. ಜಾತ್ರೆ ನಡೆದ ದಿನದಂದು ಯಾರೂ ಅಲ್ಲಿ ವಾಸ ಮಾಡದೇ ರಾತ್ರಿ 10 ಗಂಟೆಯ ಒಳಗಾಗಿ ಎಲ್ಲರೂ ಪಟ್ಟಣ ಸೇರಿಕೊಳ್ಳುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣದ ‘ಬೀಸಲ್’ ವಂಶಸ್ಥರು ಈ ದೇವತೆಯ ಪೂಜಾರಿಗಳಾಗಿದ್ದು ಜಾತ್ರೆಗೆ ಮುಂಚೆ ಐದು ದಿನಗಳ ಕಾಲ ಕಾರ್ತಿಕ ಸೇವೆ ಮತ್ತು ಜಾತ್ರೆ ದಿನದಂದು ನಡೆಯುವ ಎಲ್ಲ ವಿಧಿವಿಧಾನಗಳನ್ನು ನೇರವೇರಿಸುತ್ತಾರೆ.

ವಿಶೇಷತೆ: ಈ ಬಾರಿ ಜಾತ್ರೆಯ ಅಂಗವಾಗಿ ಪ್ರಥಮ ಬಾರಿಗೆ ರಥೋತ್ಸವ ಜರುಗಲಿರುವುದು ವಿಶೇಷವಾಗಿದೆ. ಸಂಜೆ 4 ಗಂಟೆಯ ನಂತರ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.