ಲಿಂಗಸುಗೂರು: ನಾರಾಯಣಪುರ ಜಲಾಶಯದಿಂದ ಹೆಚ್ಚುವರಿ 2.26ಲಕ್ಷ ಕ್ಯುಸೆಕ್ ನೀರನ್ನು ಗುರುವಾರ ಮಧ್ಯಾಹ್ನ ಕೃಷ್ಣಾ ನದಿಗೆ ಹರಿಬಿಟ್ಟಿದ್ದರಿಂದ ಲಿಂಗಸುಗೂರು ತಾಲ್ಲೂಕು ನಡುಗಡ್ಡೆ ಪ್ರದೇಶದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಿದೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ನಾರಾಯಣಪುರ ಜಲಾಶಯದ ನೀರಿನ ಮಟ್ಟ 492.252 ಮೀ. ಇದ್ದು, ಆಲಮಟ್ಟಿ ಜಲಾಶಯದಿಂದ ಬರುತ್ತಿರುವ ಒಳ ಹರಿವು ಹೆಚ್ಚಾಗಿದ್ದರಿಂದ ನೀರಿನ ಮಟ್ಟವನ್ನು 491.550ಮೀ.ಗೆ ಸೀಮಿತಗೊಳಿಸಿ ಹೆಚ್ಚುವರಿ ನೀರನ್ನು 26 ಕ್ರೆಸ್ಟ್ಗೇಟ್ಗಳನ್ನು 1.5ಮೀ ಎತ್ತುವ ಮೂಲಕ 2.26 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಇದರಿಂದ ಪ್ರವಾಹದ ಭೀತಿ ಹೆಚ್ಚಾಗಿದೆ.

ನಾರಾಯಣಪುರ ಬಲದಂಡೆ ನಾಲೆಗೆ 2300 ಕ್ಯುಸೆಕ್, ನಾರಾಯಣಪುರ ಎಡದಂಡೆ ನಾಲೆಗೆ 5300 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ಶೀಲಹಳ್ಳಿ ಮತ್ತು ಹಂಚಿನಾಳ ಮಧ್ಯೆ ನಿರ್ಮಿಸಲಾದ ಸೇತುವೆ ಸಂಪೂರ್ಣ ಮುಳುಗಿ ಸಾರ್ವಜನಿಕ ಸಂಪರ್ಕ ಕಡಿದುಕೊಂಡಿದೆ.

ನಡುಗಡ್ಡೆ ಪ್ರದೇಶದ ಗ್ರಾಮಗಳಾದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮಗಳು ತಾಲ್ಲೂಕು ಕೇಂದ್ರದ ಸಂಪರ್ಕ ಕಳೆದುಕೊಂಡಿವೆ. ಇದರಿಂದ 45ಕಿ.ಮೀ ಸುತ್ತುವರಿದು ಬರುವ ಏಕೈಕ ಮಾರ್ಗ ಜಲದುರ್ಗ ಸೇತುವೆ ಬಳಸುವುದು ಅನಿವಾರ್ಯವಾಗಿದೆ.

ಗುರುವಾರ ಹೆಚ್ಚುವರಿ ನೀರು ನದಿಗೆ ಹರಿಸುವ ಸುದ್ದಿ ತಿಳಿಯುತ್ತಿದ್ದಂತೆ ಉಪ ವಿಭಾಗಾಧಿಕಾರಿ ಡಾ. ಆರ್ ಸೆಲ್ವಮಣಿ ನೇತೃತ್ವದಲ್ಲಿ ವಿಶೇಷ ತಂಡದ ಅಧಿಕಾರಿಗಳು ಕೃಷ್ಣಾ ತಟದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೃಷ್ಣಾ ತಟದ ಜಲದುರ್ಗ, ಶೀಲಹಳ್ಳಿ, ಹಂಚಿನಾಳ, ಗೋನವಾಟ್ಲ, ಯಳಗುಂದಿ, ಕಡದರಗಡ್ಡಿ, ಯರಗೋಡಿ, ಟಣಮನಕಲ್, ಗದ್ದಗಿ ಗ್ರಾಮದ ರೈತರಿಗೆ ನದಿ ದಂಡೆ ಬಳಿ ಅಳವಡಿಸಿದ್ದ ಪಂಪ್ಸೆಟ್ ಸ್ಥಳಾಂತರ ಮಾಡುವಂತೆ ತಂಡ ಸೂಚಿಸಿತು. ಜನರು ಮತ್ತು ಜಾನುವಾರು ಪ್ರವಾಹ ಕಡಿಮೆ ಆಗುವವರೆಗೆ ಎತ್ತರದ ಪ್ರದೇಶಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದರು.

‘ಸರ್ಕಾರದ ಭಿಕ್ಷೆ ಬೇಡ’: ‘ಪ್ರವಾಹದಿಂದ ನಡುಗಡ್ಡೆ ಪ್ರದೇಶಗಳಲ್ಲಿರುವ ಕರಕಲಗಡ್ಡಿ (4), ಅರಲಗಡ್ಡಿಯಲ್ಲಿ (11), ವಂಕಂನಗಡ್ಡಿಯಲ್ಲಿ (1)ಕುಟುಂಬ ಸೇರಿ ಒಟ್ಟು 16 ಕುಟುಂಬಗಳ 60ಕ್ಕೂ ಹೆಚ್ಚು ಜನ, ಜಾನುವಾರು ಸಮೇತ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ತಾವು ಪಡಿತರ ಭಿಕ್ಷೆ ನೀಡುವ ಅಗತ್ಯ ಇಲ್ಲ. ಸ್ಥಳಾಂತರ ಮಾಡಬೇಕು’ ಎಂದು ಯರಗೋಡಿ ರೈತರು ಒತ್ತಾಯಿಸಿದ್ದಾರೆ.

‘ನಡುಗಡ್ಡೆಗಳು ಸೇರಿದಂತೆ ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮದ ಜನತೆ ಪ್ರವಾಹ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಾರೆ. ಪ್ರತ್ಯೇಕ ನ್ಯಾಯಬೆಲೆ ಅಂಗಡಿಗೆ 10 ವರ್ಷದಿಂದ ಮನವಿ ಮಾಡಿದರೂ ಮಂಜೂರು ಮಾಡಿಲ್ಲ. ಪ್ರವಾಹದ ನೆಪದಲ್ಲಿ ಪಡಿತರ ತಂದು ಹಂಚಿಕೆ ಮಾಡುವುದು ಬೇಡ. ಶಾಶ್ವತವಾಗಿ ಸ್ಥಳಾಂತರ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.

ಕೇಂದ್ರದಲ್ಲಿ ದಾಸ್ತಾನು: ಕೃಷ್ಣಾ ಪ್ರವಾಹದಿಂದ ನಡುಗಡ್ಡೆ ಪ್ರದೇಶಗಳಾದ ಕರಕಲಗಡ್ಡಿ, ಅರಲಗಡ್ಡಿ, ವಂಕಂನಗಡ್ಡಿ ಜನರಿಗೆ ಹಂಚಲು ತಾಲ್ಲೂಕು ಕೇಂದ್ರದಿಂದ ತೆಗೆದುಕೊಂಡು ಹೋಗಿದ್ದ ಆಹಾರ ಧಾನ್ಯ ಬೋಟ್ ಮೂಲಕ ಹಂಚುವುದು ಅಸಾಧ್ಯವಾದ ಕಾರಣ ಯರಗೋಡಿಯ ಅಂಗನವಾಡಿ ಕೇಂದ್ರದಲ್ಲಿ ಸಂಗ್ರಹ ಮಾಡಲಾಯಿತು. ತಂಡದಲ್ಲಿ ತಹಶೀಲ್ದಾರ್ ಶಿವಾನಂದ ಸಾಗರ್, ಅಧಿಕಾರಿ ರಾಜೇಂದ್ರಕುಮಾರ, ಡಾ. ರಾಚಪ್ಪ ಇದ್ದರು.

ಎರಡು ತಲೆಮಾರುಗಳಿಂದ ಕೃಷ್ಣಾ ಪ್ರವಾಹದ ಮಧ್ಯೆ ನಡುಗಡ್ಡೆಗಳಲ್ಲಿ ಬದುಕು ಕಟ್ಟಿಕೊಂಡಿರುವ ತಮಗೆ ಶಾಶ್ವತ ಸ್ಥಳಾಂತರವೊಂದೇ ಪರಿಹಾರ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು
-ಬಸಪ್ಪ ದಳಪತಿ,
ಮುಳುಗಡೆ ಸಂತ್ರಸ್ತರ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.