ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ 23 ಮಂದಿ ಉಮೇದುವಾರಿಕೆ

ಗ್ರಾ.ಪಂ. ಚುನಾವಣೆಗೆ ಅಧಿಸೂಚನೆ: ರಂಗೇರಿದ ಹಳ್ಳಿಕಣ
Last Updated 7 ಡಿಸೆಂಬರ್ 2020, 14:45 IST
ಅಕ್ಷರ ಗಾತ್ರ

ರಾಮನಗರ: ಹಳ್ಳಿ ಸಮರ ಎಂದೇ ಹೆಸರಾದ ಗ್ರಾಮ ಪಂಚಾಯಿತಿ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಸೋಮವಾರ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಮೊದಲ ದಿನದಂದು 23 ಮಂದಿ ಉಮೇದುವಾರಿಕೆ
ಸಲ್ಲಿಸಿದರು.

ಜಿಲ್ಲೆಯಲ್ಲಿ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಿಗದಿಯಾಗಿದೆ. ಮೊದಲ ಹಂತದಲ್ಲಿ ರಾಮನಗರ ಹಾಗೂ ಕನಕಪುರ ತಾಲ್ಲೂಕಿನ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯತ್ತಿದೆ. ರಾಮನಗರ ತಾಲ್ಲೂಕಿನ 20 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಒಟ್ಟು 16 ಮಂದಿ ಮೊದಲ ದಿನದಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಗೋಪಳ್ಳಿ–1, ಮಂಚನಾಯಕನಹಳ್ಳಿ–1, ಬನ್ನಿಕುಪ್ಪೆ (ಬಿ)–3 ಹಾಗೂ ಬಿಳಗುಂಬ–5, ದೊಡ್ಡಗಂಗವಾಡಿ–2, ಕೈಲಾಂಚ–1, ಕೈಲಾಂಚ ಹೋಬಳಿಯ ಬನ್ನಿಕುಪ್ಪೆ–1, ವಿಭೂತಿಕೆರೆ–2 ನಾಮಪತ್ರ ಸಲ್ಲಿಕೆಯಾದವು. ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಧಾವಿಸಿ ನಾಮಪತ್ರ ಸಲ್ಲಿಕೆ ಮಾಡಿದರು.

ಕನಕಪುರ ತಾಲ್ಲೂಕಿನಲ್ಲಿ ಮೊದಲ ದಿನ ಒಟ್ಟಾರೆ 7 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ತೋಕಸಂದ್ರ–1, ದೊಡ್ಡಮುದವಾಡಿ–3, ಚೂಡಹಳ್ಳಿ–2, ಹೊನ್ನಿಗನಹಳ್ಳಿ–1 ಇದರಲ್ಲಿ ಸೇರಿವೆ.
ಒಟ್ಟು ಸ್ಥಾನಗಳೆಷ್ಟು: ರಾಮನಗರ ತಾಲ್ಲೂಕಿನ ಬೈರಮಂಗಲ ಗ್ರಾ.ಪಂ.ನ 21 ಸ್ಥಾನ, ಕಂಚುಗಾರನಹಳ್ಳಿ (17), ಗೋಪಳ್ಳಿ (26), ಮಂಚನಾಯಕನಹಳ್ಳಿ (34), ಬನ್ನಿಕುಪ್ಪೆ ಬಿ (20), ಹರೀಸಂದ್ರ (16), ಬಿಳಗುಂಬ (18), ಸುಗ್ಗನಹಳ್ಳಿ (20), ಮಾಯಗಾನಹಳ್ಳಿ (21), ಕೂಟಗಲ್‌ (19), ದೊಡ್ಡಗಂಗವಾಡಿ (9), ಅಕ್ಕೂರು (8), ಹುಲಿಕೆರೆ ಗುನ್ನೂರು (17), ಜಾಲಮಂಗಲ (11), ಲಕ್ಷ್ಮಿಪುರ (18), ಕೈಲಾಂಚ (15), ಹುಣಸನಹಳ್ಳಿ (21), ಬನ್ನಿಕುಪ್ಪೆ ಕೈ. (13), ವಿಭೂತಿಕೆರೆ (19) ಹಾಗೂ ಶ್ಯಾನಬೋಗನಹಳ್ಳಿ ಗ್ರಾ.ಪಂ.ನ 16 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಜಿಲ್ಲಾಧಿಕಾರಿಯಿಂದ ಅಧಿಸೂಚನೆ

ರಾಮನಗರ ಹಾಗೂ ಕನಕಪುರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ವೇಳಾಪಟ್ಟಿ ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರಗಳನ್ನು ಸಲ್ಲಿಸಲು ಇದೇ 11 ಕೊನೆಯ ದಿನ. ನಾಮಪತ್ರಗಳ ಪರಿಶೀಲನೆಯು 12 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು 14 ಕೊನೆಯ ದಿನವಾಗಿದ್ದು, 22 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ 24ರಂದು ದಿನ ಮೀಸಲಿಡಲಾಗಿದೆ. ಮತ ಎಣಿಕೆಯು 30 ರಂದು ಬೆಳಿಗ್ಗೆ 8 ಗಂಟೆಗೆ ಆಯಾ ತಾಲ್ಲೂಕು ಕೇಂದ್ರದಲ್ಲಿ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು 31 ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

118– ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಒಟ್ಟು ಗ್ರಾಮ ಪಂಚಾಯಿತಿಗಳು
56– ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಗ್ರಾ.ಪಂ.ಗಳು
981– ಮೊದಲ ಹಂತದಲ್ಲಿ ಖಾಲಿ ಇರುವ ಒಟ್ಟು ಸ್ಥಾನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT