ಶನಿವಾರ, ಸೆಪ್ಟೆಂಬರ್ 18, 2021
30 °C

40 ಚೀಲ ಆಹಾರ ಧಾನ್ಯ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಮತದಾರರಿಗೆ ಹಂಚಲು ಸರಕು ಸಾಗಣೆ ಆಟೊದಲ್ಲಿ ಕೊಂಡೊಯ್ಯುತ್ತಿದ್ದ ಸುಮಾರು 40 ಆಹಾರ ಧಾನ್ಯದ ಚೀಲಗಳನ್ನು ಪಟ್ಟಣದ ಕೋಟೆ ಮಸೀದಿ ರಸ್ತೆಯಲ್ಲಿ ಚುನಾವಣಾಧಿಕಾರಿಗಳ ತಂಡ ಭಾನುವಾರ ದಾಳಿ ನಡೆಸಿ ವಶಕ್ಕೆ ಪಡೆದಿದೆ.

ಈ ಸಂಬಂಧ ಆಟೊ ಚಾಲಕ ರಫಿ ಅಹಮದ್ ಖಾನ್ ಮತ್ತು ಸೈಯದ್ ವಸಿಂ ಎಂಬುವರನ್ನು ಬಂಧಿಸಿದೆ. ಆಟೊವನ್ನು ವಶಕ್ಕೆ ಪಡೆದು, ಪಟ್ಟಣದ ಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಮತದಾರರಿಗೆ ಹಂಚಲು ಆಹಾರ ಧಾನ್ಯಗಳ ಚೀಲಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ.

ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಚೀಲಗಳು ಯಾರಿಗೆ ಸೇರಿದ್ದು ಎನ್ನುವುದು ತಿಳಿದುಬಂದಿಲ್ಲ. ದಾಳಿ ನಡೆಸಿದ ಅಧಿಕಾರಿಗಳ ತಂಡದಲ್ಲಿ ಎಚ್.ವಿ. ರಘು, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ದಯಾನಂದ, ಭೀಮರಾಯ, ಅಬಕಾರಿ ಇಲಾಖೆಯ ಉಜ್ಜನಿ ಸುರೇಶ್, ವಾಹನ ಚಾಲಕ ರಘುನಂದನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು