ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಕ್ಕೆ ಅಗ್ನಿ ಬನ್ನಿರಾಯ ಹೆಸರಿಡಲು ಒತ್ತಾಯ

Published 29 ಮಾರ್ಚ್ 2024, 6:17 IST
Last Updated 29 ಮಾರ್ಚ್ 2024, 6:17 IST
ಅಕ್ಷರ ಗಾತ್ರ

ಮಾಗಡಿ: ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಅಗ್ನಿಬನ್ನಿರಾಯ ಸ್ವಾಮಿ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಮತ್ತು ವಿದ್ಯಾ ಅಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಗುರುವಾರ ಅಗ್ನಿಬನ್ನಿರಾಯಸ್ವಾಮಿ ಅವರ ಜಯಂತಿ ಆಚರಿಸಲಾಯಿತು.

ಅಗ್ನಿಬನ್ನಿರಾಯಸ್ವಾಮಿ ಅವರ ಭಾವಚಿತ್ರಕ್ಕೆ ತಹಶೀಲ್ದಾರ್ ಶರತ್ ಕುಮಾರ್ ಪುಷ್ಪಾರ್ಚನೆ ಮಾಡಿ ಜಯಂತಿಗೆ ಚಾಲನೆ ನೀಡಿದರು.

ನಂತರ ಅವರ ಮಾತನಾಡಿದ ಅವರು, ಅಗ್ನಿವಂಶ, ಕ್ಷತ್ರಿಯ ತಿಗಳ ಗೌಡ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯ ಸ್ವಾಮಿ ಬಗ್ಗೆ ಮಾಹಿತಿ ನೀಡಿದರು.

‘ಹಿಂದೂ ಧರ್ಮದ 18 ಪುರಾಣಗಳಲ್ಲಿ 9 ಪುರಾಣಗಳಲ್ಲಿ ಅಗ್ನಿಬನ್ನಿರಾಯರ ಮಹಿಮೆಯನ್ನು ವರ್ಣಿಸಲಾಗಿದೆ. ತಿಗಳ ಗೌಡ ಸಮುದಾಯದವರು ಶ್ರಮ ಜೀವನಕ್ಕೆ ಹೆಸರುವಾಸಿಯಾಗಿದ್ದು,  ಕೃಷಿ ಮಾಡುವ ಮೂಲಕ ಹೂವು–ಹಣ್ಣು, ತರಕಾರಿ ಬೆಳೆದು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು’ ಎಂದರು.

ಸಂಘದ ಅಧ್ಯಕ್ಷ ಮಾತನಾಡಿ, ‘ತೋಟಗಾರಿಕೆ ಮಾಡುತ್ತಿರುವ ತಿಗಳ ಗೌಡ ಕುಲದವರಿಗೆ ತೋಟಗಾರಿಕೆ ಇಲಾಖೆಯಿಂದ ಸವಲತ್ತು ಕೊಡಬೇಕು. ಪಟ್ಟಣದ ಹೊಂಬಾಳಮ್ಮನಪೇಟೆ ಸರ್ಕಲ್ ಅಗ್ನಿ ಬನ್ನಿರಾಯ ಸ್ವಾಮಿ ಸರ್ಕಲ್ ಎಂದು ನಾಮಕರಣ ಮಾಡಿ ಅಗ್ನಿ ಬನ್ನಿರಾಯ ಪುತ್ಥಳಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ಕಾರ್ಯದರ್ಶಿ ಶಿವಶಂಕರ್ ಮಾತನಾಡಿ, ತಿಗಳ ಗೌಡ ಸಮುದಾಯದವರು ಹಣಕ್ಕೆ ಬೆಲೆ ನೀಡದೆ ಶ್ರಮ ಜೀವನದಲ್ಲಿ ನಂಬಿಕೆ ಇಟ್ಟಿದ್ದಾರೆ. ಪಟ್ಟಣದಲ್ಲಿ ಬೀದಿ ಬೀದಿ ಹೂವು ಹಣ್ಣು ತರಕಾರಿ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡಿರುವ ತಿಗಳ ಗೌಡ ಸಮುದಾಯದ ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಸುಸಜ್ಜಿತ ತರಕಾರಿ ಮಾರುಕಟ್ಟೆ ಕಟ್ಟಿಸಿಕೊಡಬೇಕು. ಮಹಾಭಾರತ ಯುದ್ಧದಲ್ಲಿ ತಿಗಳ ಗೌಡ ಸಮುದಾಯದ ಬೆಂಬಲ ಇದ್ದವರು ಜಯಗಳಿಸಿದ್ದಾರೆ’ ಎಂದರು.

ಸಂಘದ ಉಪಾಧ್ಯಕ್ಷ ಗಂಗಾ ರೇವಣ್ಣ, ಸಂಘದ ಗೌರವಾಧ್ಯಕ್ಷ ರಂಗಸ್ವಾಮಯ್ಯ, ಉಪಾಧ್ಯಕ್ಷ ಗಂಗರಂಗಯ್ಯ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಯ್ಯ ಎಚ್., ಸಹ ಕಾರ್ಯದರ್ಶಿ ಮಹದೇವಯ್ಯ ಎ.ಬಿ., ಖಜಾಂಚಿ ಜಯರಾಮು ಪಿ., ಆಂತರಿಕ ಲೆಕ್ಕಪರಿಶೋಧಕ ಸೋಮಶೇಖರ್ ಎಚ್., ಪುರಸಭೆ ಸದಸ್ಯರಾದ ವೆಂಕಟರಾಮ್ ಜಯರಾಮಯ್ಯ, ಅಶ್ವತ್ಥ, ಭಾಗ್ಯಮ್ಮ ನಾರಾಯಣಪ್ಪ, ಮಾಜಿ ಸದಸ್ಯ ರೇವಣ್ಣ ಮುಖಂಡರಾದ ಮುದ್ದರಂಗಯ್ಯ, ಆರ್‌ಟಿಒ ನಿವೃತ್ತ ಅಧಿಕಾರಿ ರಾಮಣ್ಣ, ಎಎಸ್ಐ ಮರಿಯಪ್ಪ, ಲೇಖಕ ಡಿ. ರಾಮಚಂದ್ರಯ್ಯ , ರಾಮಕೃಷ್ಣ, ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯಲ್ಲಿ. ಮಂಜು, ಮೂರ್ತಿ, ರಂಗನಾಥ್, ಬೆಸ್ಕಾಂ ಅಧಿಕಾರಿ ಶಿವರಾಜ್, ರೇಣುಕಯ್ಯ, ಕೃಷ್ಣ, ಲೋಕೇಶ್, ರಂಗನಾಥ್ ಎಂ. ಇತರರು ಇದ್ದರು.

ಮಾಗಡಿ ನಾಡಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ನಿಬಂಧರಾಯಸ್ವಾಮಿ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಮತ್ತು ವಿದ್ಯಾಭಿವೃದ್ಧಿ ಸಂಘಗಳ ಸಹಾಯಕದಲ್ಲಿ ಗುರುವಾರ ಅಗ್ನಿ ಬನ್ನಿ ರಾಯ ಸ್ವಾಮಿ ಭಾವಚಿತ್ರಕ್ಕೆ ತಹಶೀಲ್ದಾರ್ ಪುಷ್ಪಾರ್ಚನೆ ಮಾಡಿ ಜಯಂತಿಕೆ ಚಾಲನೆ ನೀಡಿದರು.
ಮಾಗಡಿ ನಾಡಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ನಿಬಂಧರಾಯಸ್ವಾಮಿ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಮತ್ತು ವಿದ್ಯಾಭಿವೃದ್ಧಿ ಸಂಘಗಳ ಸಹಾಯಕದಲ್ಲಿ ಗುರುವಾರ ಅಗ್ನಿ ಬನ್ನಿ ರಾಯ ಸ್ವಾಮಿ ಭಾವಚಿತ್ರಕ್ಕೆ ತಹಶೀಲ್ದಾರ್ ಪುಷ್ಪಾರ್ಚನೆ ಮಾಡಿ ಜಯಂತಿಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT