ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬೇಡ್ಕರ್ ಜ್ಞಾನದ ಸಂಕೇತ: ಡಾ.ಹೇಮಾ ನಾಯ್ಕ

Published 7 ಡಿಸೆಂಬರ್ 2023, 6:59 IST
Last Updated 7 ಡಿಸೆಂಬರ್ 2023, 6:59 IST
ಅಕ್ಷರ ಗಾತ್ರ

ಹಾರೋಹಳ್ಳಿ: ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ. ಅವರೊಬ್ಬ ಜ್ಞಾನದ ಸಂಕೇತ. ವಿಶ್ವ ಜ್ಞಾನಿ, ಸರ್ವರ ಏಳಿಗೆ ಸೂರ್ಯ ಎಂದು ಡಾ.ಹೇಮಾ ನಾಯ್ಕ ಅಭಿಪ್ರಾಯಪಟ್ಟರು.

ಹಾರೋಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಪರಿನಿರ್ವಾಣ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಕಟ್ಟಕಡೆ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ತಾರತಮ್ಯ ಆಗದ ರೀತಿಯಲ್ಲಿ ಹೋರಾಟ ನಡೆಸಿದ ಮಹಾನ್‌ ಹೋರಾಟಗಾರ ಎಂದರು.

ಸಮಾಜದ ಜಾತಿ ತಾರತಮ್ಯ, ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿ. ಮಹಿಳೆಯರಿಗೆ ಸ್ವಾಭಿಮಾನದ ಬದುಕು, ಮತದಾನ, ಶಿಕ್ಷಣದ ಹಕ್ಕು ನೀಡಿದ ಸುಧಾರಕ ಎಂದರು.

ಡಾ.ನಾಗಭೂಷಣ್, ಸಂವಿಧಾನದಲ್ಲಿ ಬಡವರು, ಮಹಿಳೆಯರು, ಅಲ್ಪಸಂಖ್ಯಾತರ ಕಲ್ಯಾಣ ದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತಂದ ಸಮಾಜ ವಿಜ್ಞಾನಿ ಎಂದು ಬಣ್ಣಿಸಿದರು.

ಪ್ರೊ.ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಅನಿತಾ, ಡಾ.ನಿರೂಪ, ಡಾ.ಲಕ್ಷ್ಮಮ್ಮ, ಡಾ.ವೆಂಕಟೇಶ್, ಡಾ.ವೆ.ಪೂಜಾರ್ ಇದ್ದರು. ಕೃಷ್ಣ ನಾಯಕ್ ಹೋರಾಟದ ಗೀತೆಗಳನ್ನು ಹಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT