ರಾಮನಗರ: ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಜಿಲ್ಲೆಯ 6 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಜಿಲ್ಲೆಯಲ್ಲಿದ್ದ ಏಕೈಕ ಜೆಡಿಎಸ್ ಬೆಂಬಲಿತ ಚನ್ನಪಟ್ಟಣವೂ ‘ಕೈ’ವಶವಾಗಿದೆ. ಇದರೊಂದಿಗೆ ಜಿಲ್ಲೆಯ ಹಾಲಿನ ರಾಜಕಾರಣದಲ್ಲೂ ಡಿ.ಕೆ ಸಹೋದರರು ಜೆಡಿಎಸ್ ಅನ್ನು ಶೂನ್ಯಕ್ಕಿಳಿಸಿ ಮೇಲುಗೈ ಸಾಧಿಸಿದ್ದು, ಜೆಡಿಎಸ್–ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದೆ.

ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ, ಕುದೂರು, ಕನಕಪುರ ಸೇರಿ ಒಟ್ಟು 6 ಸ್ಥಾನಗಳ ಪೈಕಿ, ಕನಕಪುರದಿಂದ ಸ್ಪರ್ಧಿಸಿದ್ದ ಡಿ.ಕೆ. ಸುರೇಶ್ ಮತ್ತು ಕುದೂರಿನಿಂದ ಕಣಕ್ಕಿಳಿದಿದ್ದ ಕೆಇಬಿ ರಾಜಣ್ಣ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 4 ಸ್ಥಾನಗಳಿಗೆ ಮಾತ್ರ ಭಾನುವಾರ ಚುನಾವಣೆ ನಡೆದಿತ್ತು.

ರಾಮನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಿ. ನಾಗರಾಜ್ ಅವರು ಎದುರಾಳಿ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ರೇಣುಕಮ್ಮ ಕೆಂಪಣ್ಣ ಅವರನ್ನು, ಚನ್ನಪಟ್ಟಣದಿಂದ ಸ್ಪರ್ಧಿಸಿದ್ದ ಎಸ್. ಲಿಂಗೇಶ್ ಕುಮಾರ್ ಅವರು ಬಿ.ಸಿ. ಜಯಮುತ್ತು ಅವರನ್ನು, ಮಾಗಡಿಯಿಂದ ಎಚ್.ಎನ್. ಅಶೋಕ್ (ತಮ್ಮಾಜಿ) ಅವರು ಚಂದ್ರಮ್ಮ ಅವರನ್ನು ಹಾಗೂ ಹಾರೋಹಳ್ಳಿಯಲ್ಲಿ ಹರೀಶ್ ಕುಮಾರ್ ಅವರು ಬಸವರಾಜು ಅವರನ್ನು ಮಣಿಸಿ ಗೆಲುವಿನ ನಗೆ ಬೀರಿದರು.

ರಾಮನಗರದ ನಾಗರಾಜ್ ಸತತ 6ನೇ ಬಾರಿ ಗೆಲುವು ಸಾಧಿಸಿದ್ದರೆ, ಹಾರೋಹಳ್ಳಿಯ ಹರೀಶ್ ಕುಮಾರ್ 2ನೇ ಸಲ, ಚನ್ನಪಟ್ಟಣದ ಲಿಂಗೇಶ್ 3ನೇ ಸಲ ಹಾಗೂ ಮಾಗಡಿಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಸಹೋದರ ಎಚ್.ಎನ್. ಅಶೋಕ್ ಮೊದಲ ಸಲ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಚನ್ನಪಟ್ಟಣ ಅಭ್ಯರ್ಥಿ ಗೆಲುವಿನಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಮಾಗಡಿ ಅಭ್ಯರ್ಥಿ ಗೆಲುವಿನಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಮಹತ್ವದ ಪಾತ್ರ ವಹಿಸಿದ್ದಾರೆ.

ಸಹೋದರರ ಮೇಲುಗೈ: ಬೆಂಗಳೂರು ದಕ್ಷಿಣ (ಹಿಂದಿನ ರಾಮನಗರ) ಜಿಲ್ಲೆಯಲ್ಲಿ ವಿಧಾನಸಭಾ, ಲೋಕಸಭಾ, ವಿಧಾನ ಪರಿಷತ್, ಬಮೂಲ್, ಬಿಡಿಸಿಸಿ ಬ್ಯಾಂಕ್ ಸೇರಿದಂತೆ ಪ್ರತಿ ಚುನಾವಣೆಯೂ ಕಾಂಗ್ರೆಸ್ನ ಡಿ.ಕೆ ಸಹೋದರರು (ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್) ಹಾಗೂ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ನಡುವಣ ಪ್ರತಿಷ್ಠೆಯ ಪಣದೊಂದಿಗೆ ನಡೆಯುತ್ತದೆ. 2023ರ ವಿಧಾನಸಭಾ ಚುನಾವಣೆ ಬಳಿಕ ಸಹೋದರರು ಸತತವಾಗಿ ಎಲ್ಲಾ ಚುನಾವಣೆಗಳಲ್ಲೂ ಮೇಲುಗೈ ಸಾಧಿಸುತ್ತಲೇ ಬಂದಿದ್ದಾರೆ.

ಇದೇ ಪ್ರತಿಷ್ಠೆಯೊಂದಿಗೆ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ರಾಮನಗರದಲ್ಲೂ ಡಿ.ಕೆ ಸಹೋದರರು ‘ಕೈ’ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಜಿಲ್ಲೆಯ 4 ಸ್ಥಾನಗಳ ಪೈಕಿ, 3ರಲ್ಲಿ ಪಕ್ಷದ ಬಾವುಟ ಹಾರಿಸಿದ್ದರು. ಎಚ್.ಡಿ. ಕುಮಾರಸ್ವಾಮಿ ಗೆದ್ದಿದ್ದ ಏಕೈಕ ಚನ್ನಪಟ್ಟಣಕ್ಕೆ 2024ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ, ಬಿಜೆ ಪಿಯ ಸಿ.ಪಿ. ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆ ತಂದು ಗೆಲ್ಲಿಸಿಕೊಂಡಿದ್ದರು.

ಜೆಡಿಎಸ್–ಬಿಜೆಪಿ ನಡುವೆ ಮೈತ್ರಿ ಇದ್ದರೂ ಉಪ ಚುನಾವಣೆಯಲ್ಲಿ ಚನ್ನಪಟ್ಟಣವನ್ನು ಉಳಿಸಿಕೊಳ್ಳಲಾಗಲಿಲ್ಲ. ಜಿಲ್ಲೆಯ ವಿಧಾನ ಪರಿಷತ್ (ಶಿಕ್ಷಕರ ಕ್ಷೇತ್ರದ, ಪದವೀಧರರ ಕ್ಷೇತ್ರದ ಹಾಗೂ ಸ್ಥಳೀಯ ಸಂಸ್ಥೆ) ಸದಸ್ಯರೆಲ್ಲರೂ ಕಾಂಗ್ರೆಸ್ನವರೇ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯನ್ನೂ ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿಯಿಂದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದ ಮೈತ್ರಿಕೂಟ ಸಹೋದರರಿಗೆ ದೊಡ್ಡ ಆಘಾತ ನೀಡಿತ್ತು. ಇದು ಡಿಕೆಶಿ ಮತ್ತು ಎಚ್ಡಿಕೆ ನಡುವಣ ರಾಜಕೀಯ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ.

ನಾಗರಾಜುಗೆ 6ನೇ ಗೆಲುವು

ರಾಮನಗರದಿಂದ ಗೆದ್ದಿರುವ ಪಿ. ನಾಗರಾಜು ಕಳೆದ 40 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿದ್ದು, ಇದೀಗ ಸತತ 6ನೇ ಸಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 4 ಬಾರಿ ಚುನಾವಣೆ ಎದುರಿಸಿ ಹಾಗೂ 2 ಸಲ ಅವಿರೋಧವಾಗಿ ಆಯ್ಕೆಯಾಗಿರುವ ಅವರು, ಒಮ್ಮೆ ಕೆಎಂಎಫ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಸಲ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರೇಣುಕಮ್ಮ ಕೆಂಪಣ್ಣ ಎದುರು ನಾಗರಾಜು 89 ಮತಗಳನ್ನು ಪಡೆದು ಗೆದ್ದಿದ್ದಾರೆ. ಎದುರಾಳಿ ರೇಣುಕಮ್ಮ 51 ಮತಗಳನ್ನಷ್ಟೇ ಪಡೆದಿದ್ದಾರೆ.
.BAMUL Election | ಅಣ್ಣನ ಬಲ; ತಮ್ಮನಿಗೆ ಭಾರಿ ಅಂತರದ ಗೆಲುವು.ಕಾಂಗ್ರೆಸ್ ತೆಕ್ಕೆಗೆ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.