ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಬರಡನಹಳ್ಳಿ ಮಾರಮ್ಮ ಅಗ್ನಿಕೊಂಡೋತ್ಸವ

Published 3 ಮೇ 2024, 5:57 IST
Last Updated 3 ಮೇ 2024, 5:57 IST
ಅಕ್ಷರ ಗಾತ್ರ

ಕನಕಪುರ: ಕಸಬಾ ಹೋಬಳಿ ಬರಡನಹಳ್ಳಿ ಗ್ರಾಮದಲ್ಲಿ ಮಾರಮ್ಮ ಅಗ್ನಿಕೊಂಡೋತ್ಸವವು ಬುಧವಾರ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯಿತು.

ಮಂಗಳವಾರ ರಾತ್ರಿ ನಡೆದ ಎಳವಾರ ಕಾರ್ಯಕ್ರಮದಲ್ಲಿ ಸೌದೆಯನ್ನು ಕೊಂಡದಲ್ಲಿ ಹಾಕಿ ಅಗ್ನಿಪೂಜೆ ನೆರವೇರಿಸಿ ಕೆಂಡವನ್ನಾಗಿ ಮಾಡಲಾಯಿತು. ಬುಧವಾರ ಬೆಳಿಗ್ಗೆ ಗ್ರಾಮದ ಜನರು ಚಿಕ್ಕಹೊಳೆಯಲ್ಲಿ ಗಂಗಾಪೂಜೆಯನ್ನು ನೆರವೇರಿಸಿ, ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ಕರೆತಂದರು. ಗ್ರಾಮದ ಮಹಿಳೆಯರು ತಂಬಿಟ್ಟಿನ ಆರತಿಯನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು.

ದೇವಾಲಯದ ಅರ್ಚಕ ಮಾರಮ್ಮನ ಗಿಂಡಿಯನ್ನು ಹೊತ್ತು ಯಶಸ್ವಿಯಾಗಿ ಅಗ್ನಿಕೊಂಡವನ್ನು ಹಾಯ್ದರು. ಬುಧವಾರ ರಾತ್ರಿ ಗ್ರಾಮದಲ್ಲಿ ದೇವರ ಮೆರವಣಿಗೆ ಉತ್ಸವ ಕಾರ್ಯಕ್ರಮ ನಡೆಯಿತು. ದೇವರಿಗೆ ಮನೆ ಮುಂದೆ ಆರತಿ ನೀಡಿ ಪೂಜೆ ಸಲ್ಲಿಸಿದರು.

ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಮಾರಮ್ಮ ದೇವಿಯ ಕೊಂಡೋತ್ಸವದಲ್ಲಿ ಅರ್ಚಕ ವೀರಭದ್ರ ಅವರು ಮಾರಮ್ಮನ ಗಿಂಡಿಯನ್ನು ಹೊತ್ತು ಮೆರವಣಿಗೆಯಲ್ಲಿ ಹೋಗುತ್ತಿರುವುದು
ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಮಾರಮ್ಮ ದೇವಿಯ ಕೊಂಡೋತ್ಸವದಲ್ಲಿ ಅರ್ಚಕ ವೀರಭದ್ರ ಅವರು ಮಾರಮ್ಮನ ಗಿಂಡಿಯನ್ನು ಹೊತ್ತು ಮೆರವಣಿಗೆಯಲ್ಲಿ ಹೋಗುತ್ತಿರುವುದು
ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ಅರ್ಚಕ ವೀರಭದ್ರ ಅಗ್ನಿಕೊಂಡವನ್ನು ಯಶಸ್ವಿಯಾಗಿ ಆಯುವುದನ್ನು ಸಾವಿರಾರು ಜನರು ವೀಕ್ಷಣೆ ಮಾಡಿದರು
ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ಅರ್ಚಕ ವೀರಭದ್ರ ಅಗ್ನಿಕೊಂಡವನ್ನು ಯಶಸ್ವಿಯಾಗಿ ಆಯುವುದನ್ನು ಸಾವಿರಾರು ಜನರು ವೀಕ್ಷಣೆ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT