ರಾಮನಗರ: ತಾಲ್ಲೂಕಿನ ಜಯಪುರ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಬಸ್ ಪಲ್ಟಿಯಾಗಿ 15 ಮಹಿಳೆಯರು ಗಾಯಗೊಂಡರು.

ಬಸವನಪುರದಲ್ಲಿನ ಮಧುರಾ ಗಾರ್ಮೆಂಟ್ಸ್‌ಗೆ ತೆರಳಲು ಒಟ್ಟು 20 ಮಹಿಳೆಯರು ಬಸ್‌ನಲ್ಲಿ ಹೊರಟಿದ್ದರು. ರಸ್ತೆಯಲ್ಲಿ ಸ್ಕೂಟರ್ ಒಂದು ಏಕಾಏಕಿ ನಿಂತಿದ್ದು , ಅದರ ಹಿಂದೆ ಬರುತ್ತಿದ್ದ ಬಸ್‌ನ ಚಾಲಕ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಯಿತು ಎಂದು ಪೊಲೀಸರು ತಿಳಿಸಿದರು. ಇದರಿಂದಾಗಿ ಮಹಿಳೆಯರು ಗಾಯಗೊಂಡಿದ್ದು, ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು.

ಆಟೊದಲ್ಲಿ ಸಾಗಣೆ: ಗಾಯಾಳುಗಳಿಗೆ ಸಕಾಲದಲ್ಲಿ ಆಂಬುಲೆನ್ಸ್ ಸೇವೆ ದೊರೆಯದ ಕಾರಣ ಆಟೊದಲ್ಲಿಯೇ ಕೆಲವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಬೆಳಿಗ್ಗೆ 9ಕ್ಕೆ ಅಪಘಾತ ಸಂಭವಿಸಿದ್ದು, ಮೊದಲಿಗೆ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ಅಗತ್ಯವಿದ್ದಷ್ಟು ಸಂಖ್ಯೆಯಲ್ಲಿ ವೈದ್ಯರು ಲಭ್ಯ ಇರಲಿಲ್ಲ. ಹೀಗಾಗಿ ಅವರ ಸಂಬಂಧಿಕರು ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರಿಂದ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಮೂರು ಆಂಬುಲನ್ಸ್ ಕೂಡ ಸೇವೆಯಲ್ಲಿ ಇದ್ದುದರಿಂದ ಗಾಯಾಳುಗಳಿಗೆ ವಾಹನ ಸಿಗಲಿಲ್ಲ. 10 ಮಹಿಳೆಯರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಅವರೇ ಡಿಸ್ಚಾರ್ಜ್ಆದರು’ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ವಿಜಯ ನರಸಿಂಹ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.