ಶುಕ್ರವಾರ, ಆಗಸ್ಟ್ 6, 2021
25 °C

ರಾಮನಗರ ಬಸವನಪಾಳ್ಯ: ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಬಸವನಪಾಳ್ಯ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 5 ವರ್ಷದ ಗಂಡು ಚಿರತೆಯೊಂದು ಸೆರೆಯಾಗಿದೆ ಎಂದ ವಲಯ ಅರಣ್ಯ ಅಧಿಕಾರಿ ಪುಷ್ಪಲತಾ ತಿಳಿಸಿದರು.

ಕಲ್ಯ ಬೆಟ್ಟದಲ್ಲಿ ಸುಳಿದಾಡುತ್ತಿದ್ದ ಚಿರತೆ ಸುತ್ತಲಿನ ಗ್ರಾಮಸ್ಥರಿಗೆ ಕಂಠಕ ಪ್ರಾಯವಾಗಿತ್ತು. ಚಿರತೆ ಸೆರೆ ಹಿಡಿಯುವಂತೆ ಕಲ್ಯದ ಮಂಜಪ್ಪ ಎಂಬುವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಕಲ್ಲಯ್ಯನಪಾಳ್ಯದಲ್ಲಿ ಹೇಮಂತ್‌ ಕುಮಾರ್‌ ಎಂಬ ಬಾಲಕ ಮತ್ತು ಕೊತ್ತಗಾನಹಳ್ಳಿಯಲ್ಲಿ ಗಂಗಮ್ಮ ಅವರನ್ನು ಚಿರತೆ ಹೊತ್ತುಹೊಯ್ದು ಕೊಂದಿತ್ತು. ಒಂದು ತಿಂಗಳ ಅವಧಿಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 12 ಚಿರತೆಗಳು ಸೆರೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು