ಶನಿವಾರ, ಸೆಪ್ಟೆಂಬರ್ 25, 2021
27 °C

ಕ್ವಾರಿಯೊಂದಕ್ಕೆ ಸ್ಫೋಟಕ ಸಾಗಿಸುತ್ತಿದ್ದ ಕಾರು ಸ್ಫೋಟ; ವ್ಯಕ್ತಿ ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಇಲ್ಲಿನ ಮರಳೇಗವಿ ಮಠದ ಸಮೀಪ ಸೋಮವಾರ ಸಂಜೆ ಕಾರ್‌ ಒಂದು ಸ್ಫೋಟಗೊಂಡಿದ್ದು, ಅದರೊಳಗಿನ ವ್ಯಕ್ತಿ ಸಜೀವವಾಗಿ ದಹನಗೊಂಡಿದ್ದಾರೆ.

ಕನಕಪುರ ನಿವಾಸಿ ಮಹೇಶ್ (48) ಮೃತರು. ಇವರು ಕನಕಪುರದಿಂದ ಮಠದ ಸಮೀಪ ಇರುವ ಕಲ್ಲು ಗಣಿಗಾರಿಕೆ ಕ್ವಾರಿಯೊಂದಕ್ಕೆ ಕಾರಿನಲ್ಲಿ ಸ್ಫೋಟಕ ಸಾಮಗ್ರಿ ತುಂಬಿಕೊಂಡು ಹೊರಟಿದ್ದರು ಎನ್ನಲಾಗಿದೆ. ಈ ಸಂದರ್ಭ ಏಕಾಏಕಿ ಸ್ಫೋಟ ಸಂಭವಿಸಿದ್ದು, ಕಾರು ಸಂಪೂರ್ಣ ಛಿದ್ರವಾಗಿದೆ. ಮಹೇಶ್‌ ಅವರ ದೇಹ ಸಹ ತುಂಡು ತುಂಡಾಗಿದೆ.

ಕನಕಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು