ಸೋಮವಾರ, ಜನವರಿ 20, 2020
27 °C

ಎಸ್.ಟಿ.ಸೋಮಶೇಖರ್ ಗೆಲುವಿಗೆ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಉಪಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಎಸ್.ಟಿ.ಸೋಮಶೇಖರ್ ಅವರ ಹುಟ್ಟೂರು ಮತ್ತೀಕೆರೆ ಶೆಟ್ಟಿಹಳ್ಳಿಯಲ್ಲಿ ಗ್ರಾಮಸ್ಥರು ಮಂಗಳವಾರ ಸಂಭ್ರಮಾಚರಣೆ ನಡೆಸಿದರು.

ಗ್ರಾಮದಲ್ಲಿ ಸೋಮಶೇಖರ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಸೋಮಶೇಖರ್ ಅವರು ರಾಜಕೀಯದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಲಿ. ಗ್ರಾಮದ ಕೀರ್ತಿ ಹೆಚ್ಚಿಸುವಂತಾಗಲಿ ಎಂದು ಶುಭ ಕೋರಿದರು.

ಲೋಕಾಯುಕ್ತ ನಿವೃತ್ತ ಅಧಿಕಾರಿ ಎಸ್.ಪಿ. ಪುಟುಸ್ವಾಮಿ, ವಕೀಲ ಎಂ.ವಿವೇಕ್, ಗ್ರಾಮದ ಮುಖಂಡರಾದ ಎಸ್.ಆರ್.ದಿಲೀಪ್, ರವಿರಾಜ್, ಸಂತೋಷ್, ಗಿರೀಶ್, ಚಲುವಪ್ರಸಾದ್, ಸೋಮ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು