ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಸಂಭ್ರಮದ ಕೆಂಕೇರಮ್ಮ ದೇವಿಯ ರಥೋತ್ಸವ

Published:
Updated:
Prajavani

ಕನಕಪುರ: ನಗರದ ಶಕ್ತಿ ದೇವತೆ ಶ್ರೀಕೆಂಕೇರಮ್ಮ ದೇವಿಯ ರಥೋತ್ಸವ ಗುರುವಾರ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ರಥದಲ್ಲಿ ಕೆಂಕೇರಮ್ಮ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ದೇವಾಲಯದ ಆವರಣದಿಂದ ಮೈಸೂರು ರಸ್ತೆ, ಕೆಂಗಲ್‌ ಹನುಮಂತಯ್ಯ ವೃತ್ತದ ಮೂಲಕ ಕೋಡಿಹಳ್ಳಿ ರಸ್ತೆ ಮಾರ್ಗವಾಗಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಸಾಗಿತು.

ರಥೋತ್ಸವದಲ್ಲಿನ ಉತ್ಸವ ಮೂರ್ತಿಗೆ ಪ್ರತಿ ಮನೆಯವರು ಆರತಿ ಎತ್ತಿ ಪೂಜೆ ನೆರವೇರಿಸಿದರು. ನೂರಾರು ಭಕ್ತರು ರಥೋತ್ಸವದದಲ್ಲಿ ಪಾಲ್ಗೊಂಡಿದ್ದರು.

Post Comments (+)