ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಮಾಜಿ ಶಾಸಕರು, ಪೊಲೀಸರ ನಡುವೆ ಮಾತಿನ ಚಕಮಕಿ

Published 30 ಜೂನ್ 2024, 13:59 IST
Last Updated 30 ಜೂನ್ 2024, 13:59 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಸೋಮೇಶ್ವರ ಬಡಾವಣೆ ಹತ್ತಿರ ಮಾಗಡಿ ಪೊಲೀಸರು ವಾಹನ ಸವಾರರಿಗೆ ಸಂಚಾರ ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸುವ ವೇಳೆ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಪೊಲೀಸರ ನಡುವೆ ದಂಡ ವಿಚಾರವಾಗಿ ಮಾತಿನ ಸಮರ ನಡೆಯಿತು.

ಭಾನುವಾರ ಮಾಜಿ ಶಾಸಕ ಎ.ಮಂಜುನಾಥ್ ವಿವಿಧ ಕಾರ್ಯಕ್ರಮಕ್ಕೆ ಭಾಗವಹಿಸಲು ಸೋಮೇಶ್ವರ ಬಡಾವಣೆ ಮೂಲಕ ಹೋಗುವಾಗ ದಂಡ ಹಾಕುತ್ತಿರುವ ಪೊಲೀಸರನ್ನು ಪ್ರಶ್ನೆ ಮಾಡಿದರು. ಈ ರೀತಿ ರಜಾ ದಿನಗಳಲ್ಲಿ ದಂಡ ವಿಧಿಸಿದರೆ ಸಾರ್ವಜನಿಕರಿಗೆ ತೊಂದರೆ ಆಗೋದಿಲ್ಲವೇ ದೂರದ ಊರುಗಳಿಂದ ಗ್ರಾಮಗಳಿಗೆ ತೆರಳಲು ಬಂದಿರುತ್ತಾರೆ. ಈ ವೇಳೆ ಅವರನ್ನು ನಿಲ್ಲಿಸಿ ದಂಡ ಹಾಕಿದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT