ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಸ್ವಚ್ಛತಾ ಆಂದೋಲನಕ್ಕೆ ಚಾಲನೆ

Last Updated 10 ಜನವರಿ 2020, 12:49 IST
ಅಕ್ಷರ ಗಾತ್ರ

ತಿಪ್ಪಸಂದ್ರ(ಮಾಗಡಿ): ಸ್ವಚ್ಛತೆ ಇರುವಲ್ಲಿ ದೇವರು ನೆಲೆಸಿದ್ದಾರೆ ಎಂಬ ಪೂರ್ವಿಕರ ನಂಬಿಕೆಯಂತೆ ಗ್ರಾಮದ ಆರಾಧನಾ ಮಂದಿರಗಳ ಬಳಿ ಸ್ವಚ್ಛತೆ ಮಾಡುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟಿನ ತಾಲ್ಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ತಿಳಿಸಿದರು.

ಹುಳ್ಳೇನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಗತಿಬಂದು ಒಕ್ಕೂಟಗಳ ಪದಾಧಿಕಾರಿಗಳಿಂದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶವಾಸಿಗಳ ದೇಹ ಮತ್ತು ಮನಸ್ಸು ಹಾಗೂ ಪರಿಸರವನ್ನು ಶುದ್ಧಗೊಳಿಸಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಂಕಲ್ಪ ಮಾಡಿದ್ದಾರೆ. ಶ್ರಮದಾನದ ಮೂಲಕ ಗ್ರಾಮದ ಸ್ವಚ್ಛತೆ ಕಾಪಾಡಲು ಉಚಿತ ಸೇವೆ ಮಾಡಬೇಕಿದೆ. ಮೊದಲು ದೇವಾಲಯ, ಮಸೀದಿ, ಚರ್ಚ್‌ಗಳು, ಬಸದಿ, ವಿಹಾರಗಳ ಬಳಿ ಸ್ವಚ್ಛತೆ ಮಾಡಲಾಗುತ್ತಿದೆ. ಎಲ್ಲರೂ ಸಹಕಾರ ನೀಡಿ ಶುದ್ಧ ವಾತಾವರಣ ನಿರ್ಮಿಸಲು ಮುಂದೆ ಬರಬೇಕು ಎಂದರು.

ಮೇಲ್ವಿಚಾರಕ ಜಯಣ್ಣ ಮಾತನಾಡಿದರು. ತಿಪ್ಪಸಂದ್ರ ಹೋಬಳಿ ಪ್ರಗತಿಬಂಧು ಒಕ್ಕೂಟಗಳ ಪದಾಧಿಕಾರಿಗಳು ಗ್ರಾಮದ ಆಂಜನೇಯಸ್ವಾಮಿ, ತಿಪ್ಪಸಂದ್ರದ ರಾಮಮಂದಿರದ ಸುತ್ತಲಿನ ಕಸವನ್ನು ಸ್ವಚ್ಛಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT