ಶನಿವಾರ, ಆಗಸ್ಟ್ 13, 2022
23 °C

ರಾಮನಗರ: 4 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್‌ ಸೋಂಕಿತರ ಸಂಖ್ಯೆಯು 4 ಸಾವಿರದ ಗಡಿ ದಾಟಿದೆ.

ಈ ದಿನ 57 ಮಂದಿಯಲ್ಲಿ ಹೊಸತಾಗಿ ಸೋಂಕು ದೃಢವಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆಯು 4034ಕ್ಕೆ ಏರಿಕೆ ಆಗಿದೆ. ಚನ್ನಪಟ್ಟಣ 12, ಕನಕಪುರ 8, ಮಾಗಡಿ 19 ಮತ್ತು ರಾಮನಗರ 18 ಪ್ರಕರಣಗಳು ವರದಿ ಆಗಿವೆ. ಒಟ್ಟಾರೆಯಾಗಿ ಚನ್ನಪಟ್ಟಣದಲ್ಲಿ 966, ಕನಕಪುರ 826, ಮಾಗಡಿ 610 ಮತ್ತು ರಾಮನಗರದಲ್ಲಿ 1632 ಪ್ರಕರಣಗಳು ವರದಿ ಆಗಿವೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 12, ಕನಕಪುರ ತಾಲ್ಲೂಕಿನಲ್ಲಿ 11, ಮಾಗಡಿ ತಾಲ್ಲೂಕಿನಲ್ಲಿ 13 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 15 ಜನ ಸೇರಿ ಒಟ್ಟಾರೆ 51 ಮಂದಿ ನಿಧನರಾಗಿದ್ದಾರೆ.

ಗುಣಮುಖ: ಚನ್ನಪಟ್ಟಣ ತಾಲ್ಲೂಕಿನಲ್ಲಿ 22, ಕನಕಪುರ ತಾಲ್ಲೂಕಿನಲ್ಲಿ 18, ಮಾಗಡಿ ತಾಲ್ಲೂಕಿನಲ್ಲಿ 6 ಹಾಗೂ ರಾಮನಗರ ತಾಲ್ಲೂಕಿನಲ್ಲಿ 47 ಜನ ಸೇರಿ ಒಟ್ಟಾರೆ 93 ಜನರು ಮಂಗಳವಾರ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 3040 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 753, ಕನಕಪುರ 617, ಮಾಗಡಿ 384 ಮತ್ತು ರಾಮನಗರ 1286 ಜನರು ಸೇರಿದ್ದಾರೆ. ಇನ್ನೂ 943 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು