ಗುರುವಾರ , ಜನವರಿ 27, 2022
20 °C
ಅಗತ್ಯ ಸೇವೆಗಳಿಗೆ ಅಡ್ಡಿ ಇಲ್ಲ: ಅಲ್ಲಲ್ಲಿ ಪೊಲೀಸರ ತಪಾಸಣೆ

ರಾಮನಗರ | ಹೋಟೆಲ್‌ ಬಂದ್‌: ಊಟಕ್ಕಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಾದ್ಯಂತ ಶನಿವಾರ ವಾರಾಂತ್ಯ ಕರ್ಫ್ಯೂ‌ ಜಾರಿಯಾಗಿದ್ದು, ಜನಜೀವನಕ್ಕೆ ಇದರಿಂದ ಹೆಚ್ಚಿನ ತೊಂದರೆ ಆಗಲಿಲ್ಲ.

ಬೆಳಿಗ್ಗೆ ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆಯ ತರಕಾರಿ ಮಾರಾಟ ಪ್ರಾಂಗಣದಲ್ಲಿ ಎಂದಿನಂತೆ ವಹಿವಾಟು ನಡೆದಿದ್ದು, ಜನಸಂದಣಿ ಹೆಚ್ಚಿತ್ತು. ಜನ ಎಂದಿನಂತೆ ಖರೀದಿ ನಡೆಸಿದರು. ಪೊಲೀಸರು ಕಾಣಿಸಲಿಲ್ಲ. ಕರ್ಫ್ಯೂ ಕುರಿತು ಧ್ವನಿವರ್ಧಕಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇರಲಿಲ್ಲ. ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆದಿದ್ದು, ರೈತರು ದೂರದ ಊರುಗಳಿಂದಲೂ ಗೂಡು ಹೊತ್ತು ಬಂದಿದ್ದರು.

ಹಾಲು, ತರಕಾರಿ, ಮಾಂಸ ಸೇರಿದಂತೆ ದಿನಬಳಕೆಯ ವಸ್ತುಗಳ ಮಾರಾಟಕ್ಕೆ ಯಾವುದೇ ತೊಂದರೆ ಇರಲಿಲ್ಲ. ಪ್ರಾವಿಜನ್ ಸ್ಟೋರ್, ಔಷಧಿ ಅಂಗಡಿಗಳು, ರಸಗೊಬ್ಬರ ಮಾರಾಟ, ಪೆಟ್ರೋಲ್ ಬಂಕ್, ಆಸ್ಪತ್ರೆ, ಮೆಡಿಕಲ್ ಸ್ಟೋರ್ ಸೇರಿದಂತೆ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆ ಆಗಲಿಲ್ಲ.

ಯಾವುದೆಲ್ಲ ವ್ಯತ್ಯಯ: ವಾರಾಂತ್ಯದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳ ಬಾಗಿಲು ಮುಚ್ಚಿದ್ದು, ಮದ್ಯ‌‌ಪ್ರಿಯರು ನಿರಾಸೆ ಅನುಭವಿಸಿದರು. ವಾಣಿಜ್ಯ ಮಳಿಗೆಗಳು ಬಂದ್ ಆಗಿದ್ದವು. ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಆಹಾರ ವಿತರಣೆಯನ್ನು ನಿಲ್ಲಿಸಲಾಗಿತ್ತು. ಕೇವಲ‌ ಪಾರ್ಸಲ್ ಸೇವೆಗೆ ಮನಸ್ಸು‌ ಮಾಡದ ಹೋಟೆಲ್ ಮಾಲೀಕರು ಬಾಗಿಲು ಬಂದ್ ಮಾಡಿದರು.‌ ಇದರಿಂದಾಗಿ ಕಾರ್ಮಿಕರು, ಬಡ ಜನರು ಆಹಾರಕ್ಕಾಗಿ ಪರದಾಡುವಂತೆ ಆಯಿತು.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಇದ್ದು, ಜನರ ಓಡಾಟಕ್ಕೆ ಹೆಚ್ಚಿನ ತೊಂದರೆ ಆಗಲಿಲ್ಲ. ಬೆಳಿಗ್ಗೆ ಎಂದಿನಂತೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿದವು. ಗ್ರಾಮೀಣ ಪ್ರದೇಶಗಳಿಗೂ‌ ಬಸ್‌ಗಳು ಸಂಚಾರ ಕೈಗೊಂಡವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.