ಬುಧವಾರ, ಜನವರಿ 22, 2020
17 °C

ಫೇಸ್‌ಬುಕ್‌ನಲ್ಲಿ ಅವಹೇಳನಾಕಾರಿ ಪೋಸ್ಟ್: ಎಸ್ಪಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಹೈದರಾಬಾದ್ ‌ನಲ್ಲಿ ಈಚೆಗೆ ಅತ್ಯಾಚಾರ, ಹತ್ಯೆಗೆ ಒಳಗಾದ ಪಶುವೈದ್ಯೆ ಮತ್ತು ರೆಡ್ಡಿ‌ ಸಮುದಾಯದ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಚನ್ನಪಟ್ಟಣದ ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ರಾಮನಗರ ಜಿಲ್ಲಾ ರೆಡ್ಡಿ ಸಮುದಾಯವು ಮಂಗಳವಾರ ಎಸ್ಪಿಗೆ ದೂರು ನೀಡಿತು.

ಪುಟ್ಟಸ್ವಾಮಿ ಅವರು ತಮ್ಮ ಫೇಸ್ ಬುಕ್ ಬರಹದಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಹಾಗೂ ರೆಡ್ಡಿ ಸಮುದಾಯದ ಗೌರವಕ್ಕೆ ಕುಂದು ಉಂಟು ಮಾಡುವಂತೆ ಬರೆದಿದ್ದಾರೆ.  ಅಲ್ಲದೆ ಮಹಿಳೆಯರ ಬಗ್ಗೆಯೂ ಮುಜುಗರ ತರುವಂತಹ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ. ಇದು ಜಾತಿಗಳ ನಡುವೆ ವೈಷಮ್ಯ ಹುಟ್ಟಿಸುವಂತೆ ಇದೆ. ಇದರಿಂದ ಇಡೀ ರೆಡ್ಡಿ ಸಮುದಾಯದ ಜನರ ಭಾವನೆಗಳಿಗೆ ನೋವುಂಟಾಗಿದೆ.  ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಮುದಾಯದ ಜನರು ಮನವಿ ಮಾಡಿದರು.
ಸಂದೀಪ್, ಚಂದ್ರಶೇಖರ ರೆಡ್ಡಿ, ಸುರೇಶ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು