ಬುಧವಾರ, ಏಪ್ರಿಲ್ 8, 2020
19 °C

ಕುಡಿಯುವ ನೀರು ಪೂರೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಟವಾಳ್‌ ದಲಿತ ಕಾಲೊನಿಯಲ್ಲಿ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ ಎಂದು ಕಾಲೊನಿ ನಿವಾಸಿಗಳು ತಿಳಿಸಿದ್ದು, ಕೂಡಲೆ ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಿದ್ದಾರೆ.

ಕಾಲೊನಿಯಲ್ಲಿ 89 ಮನೆಗಳಿವೆ. ಪುರಾತನ ಕಾಲದಿಂದಲೂ ಕಲ್ಲುಬಾವಿಯಿಂದ ನೀರು ಸಂಗ್ರಹಿಸಿ ಬಳಸುತ್ತಿದ್ದೆವು. ಈಗ ಬೇಸಿಗೆಯಲ್ಲಿ ಕಲ್ಲುಬಾವಿಯಲ್ಲೂ ನೀರಿಲ್ಲದೆ ಕೊರತೆ ಎದುರಾಗಿದೆ ಎಂದು ಮಹಿಳೆಯರು ತಿಳಿಸಿದರು.

ಕಾಲೊನಿಯಲ್ಲಿ ಅರ್ಧ ಸಿಸಿ ರಸ್ತೆ ಮಾಡಿದ್ದಾರೆ. ಇನ್ನುಳಿದಂತೆ ರಸ್ತೆ ದುರಸ್ತಿಯಾಗಿಲ್ಲ. ರಸ್ತೆ ಬದಿ ವಿಷಜಂತುಗಳು ಓಡಾಡುತ್ತಿವೆ. ರಾತ್ರಿ ವೇಳೆ ಬೀದಿ ದೀಪ‍ಗಳಿರುವುದಿಲ್ಲ. ಮೂಲಸವಲತ್ತುಗಳನ್ನು ಒದಗಿಸಬೇಕು ಎಂದು ಕಾಲೊನಿ ನಿವಾಸಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)