ಮಾಗಡಿ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಮಂಚನಬೆಲೆ ಜಲಾಶಯಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದ ಕಲುಷಿತ ನೀರು ಸೇರಿತ್ತಿರುವುದರಿಂದ ಯೋಜನೆಗೆ ಗ್ರಹಣ ಹಿಡಿದಿದೆ.

ತಿಪ್ಪಗೊಂಡನಹಳ್ಳಿ ಜಲಾಶಯ ಶುದ್ಧೀಕರಣ ಕಾಮಗಾರಿ ಮಾಡುತ್ತಿರುವುದರಿಂದ ಕಲುಷಿತ ನೀರು ನೇರವಾಗಿ ಮಂಚನಬೆಲೆ ಜಲಾಶಯಕ್ಕೆ ಹರಿಸಲಾಗುತ್ತಿದೆ. ಜಲಾಶಯದಲ್ಲಿ ಗಬ್ಬು ವಾಸನೆ ಬೀರುತ್ತಿದೆ. ಇದೇ ನೀರು ಮಾಗಡಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯ ಕಾಮಗಾರಿ ಪೂರ್ಣವಾಗುವವರೆಗೂ ಸಮಸ್ಯೆ ಮಾತ್ರ ತಪ್ಪಿದ್ದಲ್ಲ.ಕಲುಷಿತ ನೀರು ಬೇರೆ ಯಾವುದೇ ಮಾರ್ಗವಾಗಿ ಬಿಡಲು ಅವಕಾಶ ಇಲ್ಲದೆ ಇರುವುದರಿಂದ ಮಂಚನಬೆಲೆ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ.

ಈಗ ಮಳೆ ಹೆಚ್ಚಾಗಿರುವುದರಿಂದ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಹೆಚ್ಚಾಗಿ ಹರಿಯುತ್ತಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಅಧಿಕಾರಿಗಳ ಮೌನ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಯಾವುದೇ ರೀತಿ ಕ್ರಮಕೈಗೊಳ್ಳುತ್ತಿಲ್ಲ. ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಮಂಚನಬೆಲೆ ಜಲಾಶಯ ಮೂಲಕ ರಾಮನಗರ ಮಾರ್ಗವಾಗಿ ತಮಿಳುನಾಡಿಗೆ ಸೇರಲಿದೆ. ಬೆಂಗಳೂರಿಗೆ ನೀರು ಸರಬರಾಜು ಮಾಡುವ ಕಾರ್ಯ ಆರಂಭವಾದರೆ ಜಲಾಶಯದ ನೀರೆಲ್ಲ ಖಾಲಿಯಾಗಿ ಹೊಸ ನೀರು ಬಂದ ಮೇಲೆ ಈ ಸಮಸ್ಯೆ ಬಗೆಹರಿಯಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.

ಮಂಚನಬೆಲೆಗೆ ಎತ್ತಿನಹೊಳೆ ನೀರು:ಎತ್ತಿನಹೊಳೆ ಯೋಜನೆ ಮೂಲಕ ತಿಪ್ಪಗೊಂಡನಹಳ್ಳಿ ಹಾಗೂ ಮಂಚನಬೆಲೆ ಜಲಾಶಯಕ್ಕೆ ನೀರು ಹರಿಸುವುದಾಗಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಎರಡು ಯೋಜನೆಗಳು ಜಾರಿ ಮಾಡಿದರೆ ಈ ಭಾಗದ ಜನರ ಕುಡಿಯುವ ನೀರಿನ ದಾಹ ನೀಗಲಿದೆ. ಈಗಾಗಲೇ ಮಾಗಡಿ ಪಟ್ಟಣಕ್ಕೆ ಶುದ್ಧ ನೀರಿನ ಘಟಕಗಳಿಂದ ನೀರು ಪೂರೈಕೆ ಆಗುತ್ತಿದೆ.

ಕಾಮಗಾರಿ ಮುಗಿದು ಶುದ್ಧ ನೀರು ಬರುವವರೆಗೂ ಮಾಗಡಿ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವುದು ಮರೀಚಿಕೆಯಾಗಿದೆ
ಹೊಸಪಾಳ್ಯ ಲೋಕೇಶ್ ರೈತ ಸಂಘದ ತಾಲ್ಲೂಕು ಅಧ್ಯಕ್ಷ

ಪಟ್ಟಣಕ್ಕೆ ಶುದ್ಧ ನೀರು ಕುಡಿಯುವ ಜವಾಬ್ದಾರಿಯನ್ನು ಅಧಿಕಾರಿಗಳು ಕೂಡಲೇ ಮಾಡಬೇಕು
ಕೆ.ವಿ.ಬಾಲು. ಪುರಸಭೆ ಸದಸ್ಯ ಮಾಗಡಿ

ಕಾಮಗಾರಿ ಮಾಹಿತಿ ಇಲ್ಲ

ತಿಪ್ಪಗೊಂಡನಹಳ್ಳಿ ಜಲಾಶಯ ಶುದ್ಧೀಕರಣ ಮಾಡುತ್ತಿರುವುದರಿಂದ ಕಲುಷಿತ ನೀರು ನೇರವಾಗಿ ಮಂಚನಬೆಲೆ ಜಲಾಶಯಕ್ಕೆ ಬರುತ್ತಿದೆ. ಕಾಮಗಾರಿ ಮುಗಿಯುವವರೆಗೂ ಈ ಸಮಸ್ಯೆ ತಪ್ಪುವುದಿಲ್ಲ. ಜಲಾಶಯವನ್ನು ಬೆಂಗಳೂರು ಜಲಮಂಡಳಿ ನೋಡುತ್ತಿರುವುದರಿಂದ ಕಾಮಗಾರಿ ಬಗ್ಗೆ ಮಾಹಿತಿ ಇಲ್ಲ. ಈಗ ಜಲಾಶಯದಲ್ಲಿ ಶೇ80ರಷ್ಟು ನೀರು ಸಂಗ್ರವಾಗಿದೆ. ರಾಘವೇಂದ್ರ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.