ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಕೇರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

Last Updated 14 ಮೇ 2019, 13:41 IST
ಅಕ್ಷರ ಗಾತ್ರ

ಕನಕಪುರ: ನಗರದ ಜೋಡಿ ಗ್ರಾಮಗಳಾದ ಹಲಸಿನಮರದೊಡ್ಡಿ ಮತ್ತು ಕೋಟೆಯ ಗ್ರಾಮ ದೇವತೆ ಹಾಗೂ ಶಕ್ತಿ ದೇವತೆಯಾದ ಶ್ರೀಕೆಂಕೇರಮ್ಮ ದೇವಿಯ ಅಗ್ನಿಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವ ಮಂಗಳವಾರ ಆರಂಭಗೊಂಡಿತು.

ನಾಲ್ಕು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಹೋಮ ಮತ್ತು ಅಭಿಷೇಕ ದೇವಾಲಯದಲ್ಲಿ ನಡೆಯಿತು.

ದೇವಾಲಯ ಮತ್ತು ದೇವಾಲಯದ ಸುತ್ತಲೂ ಹಾಗೂ ಕೋಟೆ ಮತ್ತು ಹಲಸಿನಮರದೊಡ್ಡಿಯ ಎಲ್ಲಾ ರಸ್ತೆಗಳಲ್ಲೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಮಂಗಳವಾರ ಸಂಜೆ ಕೆಂಕೇರಮ್ಮನ ಎಳವಾರ ಕಾರ್ಯಕ್ರಮ ನಗರದ ಪ್ರಮುಖ ಬೀದಿಯಲ್ಲಿ ನಡೆಯಿತು, ಬುಧವಾರ ಬೆಳಿಗ್ಗೆ 6ಕ್ಕೆ ಅಗ್ನಿಕೊಂಡೋತ್ಸವ ನಡೆಯಲಿದೆ.

ಗುರುವಾರ ಮಧ್ಯಾಹ್ನ 12 ಗಂಟೆಗೆ ದೇವಿಯ ರಥೋತ್ಸವ ಆಗುವುದು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಿಡಿ ಉತ್ಸವ, ಜಾತ್ರೆ ಮತ್ತು ಸಂಜೆ 6 ಗಂಟೆಗೆ ರಸಮಂಜರಿ ಆಯೋಜಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT