ಹಾರೋಹಳ್ಳಿ: ಆರೋಗ್ಯಕರ ಬದುಕಿಗೆ ಉತ್ತಮ ಜೀವನ ಶೈಲಿ ಹಾಗೂ ಸ್ವಚ್ಚ ಮತ್ತು ಉತ್ತಮ ಪರಿಸರ ಅಗತ್ಯವಾಗಿದ್ದು, ಅದಕ್ಕಾಗಿ ನಾವು ಗಿಡಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಬೇಕು ಎಂದು ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್ ತಿಳಿಸಿದರು.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 2ನೇ ಹಂತದ ಅಂಥಮ್ ಬಯೋಸೈನ್ಸ್ ಕಾರ್ಖಾನೆಯಲ್ಲಿ ಬುಧವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒಂದು ಮರ ದಿನಕ್ಕೆ 2ಕೆಜಿ ಆಕ್ಸಿಜನ್ ಬಿಡುಗಡೆ ಮಾಡುತ್ತದೆ. ಆದ್ದರಿಂದ ಮರಗಿಡಗಳನ್ನು ಬೆಳೆಸುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಅಥೆಮ್ ಬಯೋಸೈನ್ಸ್ ಅರ್ಥಪೂರ್ಣವಾಗಿದೆ ಎಂದರು.

ಅಥಮ್ ಕಂಪನಿಯಿಂದ 200ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಅಥೆಮ್ ಬಯೋಸೈನ್ಸ್ ಕಂಪನಿಯ ಸುರಕ್ಷಾ ವಿಭಾಗದ ಮುಖ್ಯಸ್ಥ ಸಜಿತ್ ಸಹದೇವನ್ , ವ್ಯವಸ್ಥಾಪಕ ರಾಘವೇಂದ್ರ, ಕಬಿನಿ ಗೌಡ, ಸುನಿಲ್ ಕುಮಾರ್, ರಾಮಕೃಷ್ಣ, ಅಡ್ಮಿನ್ ಶಂಕರ್ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.