ಕನಕಪುರ: ಪರಿಸರ ಪ್ರೇಮಿಗಳ ಸಂಘ ಮಳಗಾಳು ಇದರ ಪದವಿ ಸ್ವೀಕಾರ ಸಮಾರಂಭ ಬಿಳಿಗಿರಿರಂಗನ ಬೆಟ್ಟದಲ್ಲಿ ಭಾನುವಾರ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ಪರಿಸರ ಪ್ರೇಮಿ ಮರಸಪ್ಪ ರವಿ, ಕಾರ್ಯದರ್ಶಿಯಾಗಿ ಮಹದೇವ್, ಖಜಾಂಚಿಯಾಗಿ ಎಂ.ವೆಂಕಟೇಶ್, ಗೌರವ ಅಧ್ಯಕ್ಷರಾಗಿ ಶ್ರೀನಿವಾಸ್ ನೇಮಕಗೊಂಡು ಪದವಿ ಸ್ವೀಕಾರ ಮಾಡಿದರು.

ನೂತನ ಅಧ್ಯಕ್ಷ ಮರಸಪ್ಪ ರವಿ ಮಾತನಾಡಿ, ಪರಿಸರ ಎಲ್ಲವನ್ನು ಕೊಟ್ಟಿದೆ. ಆದರೆ, ದುರಾಸೆಯಿಂದ ಪರಿಸರ ನಾಶ ಮಾಡಲಾಗುತ್ತಿದೆ. ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರತಿವರ್ಷ 10 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಸಂಘದಿಂದ ಉಚಿತವಾಗಿ ನೀಡಲಾಗುತ್ತಿದೆ. ಎಲ್ಲಿ ಖಾಲಿ ಜಾಗ ಸಿಗುತ್ತದೆಯೋ ಅಲ್ಲಿ ಗಿಡ ನೆಟ್ಟು ಮರವಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಡಿವೈಎಸ್ಪಿ ಶ್ರೀನಿವಾಸ್ ಮಾತನಾಡಿ, ಪರಿಸರ ಸಂಘ ಎರಡೂವರೆ ವರ್ಷಗಳಿಂದ ಸತತವಾಗಿ ಗಿಡಗಳು ನೆಡುವ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಪರಿಸರ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿ ಗ್ರಾಮದಲ್ಲೂ ಪರಿಸರ ಪ್ರೇಮಿಗಳ ಸಂಘ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಚಿಂತನೆ ನಡೆಸಬೇಕೆಂದು ಹೇಳಿದರು.

ಕಾರ್ಯದರ್ಶಿ ಮಹದೇವ್, ಖಜಾಂಚಿ ವೆಂಕಟೇಶ್, ಸವಿತಾ ಮಾದೇವ ಶಾರದ ಜಯರಾಮ್, ಸಾವಿತ್ರಿ ವೆಂಕಟರಮಣ ಸ್ವಾಮಿ, ರತ್ನ ಮರತಪ್ಪ ರವಿ, ನಿರ್ದೇಶಕರಾದ ಜೈರಾಮ್, ಅಕ್ಕಿ ವೆಂಕಟೇಶ್, ನಾಗರಾಜ್, ದಾಸಪ್ಪ, ವೆಂಕಟರಮಣ ಸ್ವಾಮಿ, ರಾಜೇಶ್, ಲಕ್ಷ್ಮಿ ಕಾಂತ, ಮಾಸ್ಟರ್ ಶ್ರೀಧರ್, ರಂಗಸ್ವಾಮಿ, ಎಂ.ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.