ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ

Published 7 ಜೂನ್ 2024, 4:40 IST
Last Updated 7 ಜೂನ್ 2024, 4:40 IST
ಅಕ್ಷರ ಗಾತ್ರ

ಬಿಡದಿ: ಬನ್ನಿಕುಪ್ಪೆ ಬಿ ಕ್ಲಸ್ಟರ್ ಕೇಂದ್ರದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳ ಹೆಸರಿನಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಈ ವೇಳೆ ಸಮೂಹ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಮಾತನಾಡಿ, ಈ ವರ್ಷದ ಶೈಕ್ಷಣಿಕ ವರ್ಷವನ್ನು ಪರಿಣಾಮಕಾರಿಯಾಗಿ ಮಾಡಲು ಶಿಕ್ಷಣ ಇಲಾಖೆ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಹೆಸರಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು ಎಂದರು.

ಚಿಕ್ಕಂದಿನಿಂದಲೇ ಎಲ್ಲರೂ ಗಿಡ ಬೆಳೆಸುವ ಹವ್ಯಾಸ ಬೆಳಸಿಕೊಳ್ಳಬೇಕು. ಮಕ್ಕಳಿಗೆ ಪರಿಸರದ ಬಗ್ಗೆ ಹಂತ ಹಂತವಾಗಿ ಬೆಳಸಬೇಕು. ಹಾಗಾಗಿ ಶಾಲೆಗಳಲ್ಲಿ ಸೈನಿಕರು, ಕವಿಗಳು, ಸಮಾಜ ಸುಧಾರಕರು, ದೇಶ ಪ್ರೇಮಿಗಳ ಹೆಸರಿನಲ್ಲಿ ಗಿಡ ನೆಡಲಾಗಿದೆ.

ಮುಖ್ಯ ಶಿಕ್ಷಕಿ ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕೆ ಹಸಿರು ಚಟುವಟಿಕೆಗಳು ಅತ್ಯಂತ ಪ್ರೇರಣದಾಯಕ ಬುನಾದಿಯಾಗುತ್ತವೆ. ವಿದ್ಯಾರ್ಥಿಗಳಲ್ಲಿ ನವೀಕರಿಸಲಾಗದ ಇಂಧನಗಳು, ಸೌರಶಕ್ತಿಯ ಬಳಕೆ, ಮಳೆ ನೀರಿನ ಕೊಯ್ಲು ಕುರಿತು ಜಾಗೃತಿ ಮೂಡಿಸಲಾಯಿತು.

ಮಂಗಳ ಗೌರಮ್ಮ ಎಂ.ಟಿ, ಭವ್ಯಾ, ಕುಮಾರ್, ಕೆ.ಭೈರವ, ಧರ್ಮೇಶ ಕೆ, ರವಿ, ಹನುಮಂತು, ಚಲುವಯ್ಯ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT