ಮಾಗಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಬೇಕಾದ ಉಪಕರಣಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ₹ 25 ಲಕ್ಷ ವೆಚ್ಚದಡಿ ಒದಗಿಸಲಾಗಿದೆ ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಐಸಿಯು ಘಟಕಕ್ಕೆ ಒದಗಿಸಿರುವ ಉಪಕರಣಗಳ ಬಳಕೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆ ವೈದ್ಯರು ಐಸಿಯು ಘಟಕದ ಸದುಪಯೋಗ ಪಡೆದುಕೊಂಡು ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ದಾರೆ. 24 ಗಂಟೆಯೂ ಸೇವೆ ಒದಗಿಸಲಾಗುತ್ತಿದೆ. ಸಾರ್ವಜನಿಕರು ಆಸ್ಪತ್ರೆಯ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಮಾತನಾಡಿ, ನಮ್ಮಲ್ಲಿನ ಸವಲತ್ತುಗಳನ್ನು ಬಳಸಿಕೊಂಡು ಎಲ್ಲಾ ವಿಧವಾದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಐಸಿಯು ಘಟಕಕ್ಕೆ ಉಪಕರಣಗಳಿಲ್ಲದೆ ತೊಂದರೆಯಾಗಿತ್ತು. ಉಪಕರಣಗಳನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿರುವ ಸರ್ಕಾರ ಮತ್ತು ಶಾಸಕ ಸಹಾಯ ವನ್ನು ಸ್ಮರಿಸುತ್ತೇವೆ ಎಂದರು.

ವೈದ್ಯರಾದ ಡಾ.ಆಶಾದೇವಿ, ಡಾ.ಜ್ಞಾನಪ್ರಕಾಶ್, ಡಾ.ರಾಕೇಶ್, ಡಾ.ರಫೀಕ್, ಡಾ.ಯಶವಂತ್, ಡಾ.ಫಾರೂಕ್, ಡಾ.ಅಭಿಜಿತ್, ಡಾ.ನಾಗನಾಥ್, ಡಾ.ಪಲ್ಲವಿ, ಡಾ.ಮಂಜುಳಾ, ಡಾ.ರಶ್ಮಿ, ಡಾ.ಮುದೊಳೆ, ಡಾ.ಚಂದ್ರಲೇಖಾ ಮುದೊಳೆ, ನರ್ಸಿಂಗ್ ಅಧೀಕ್ಷಕಿ ಪದ್ಮಾ, ಫಾರ್ಮಾಸಿಸ್ಟ್ ಗುಣಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.