ಮಾಜಿ ಶಾಸಕ ಕೆ.ಎಲ್‌.ಶಿವಲಿಂಗೇಗೌಡ ನಿಧನ

ಮಂಗಳವಾರ, ಜೂಲೈ 23, 2019
25 °C

ಮಾಜಿ ಶಾಸಕ ಕೆ.ಎಲ್‌.ಶಿವಲಿಂಗೇಗೌಡ ನಿಧನ

Published:
Updated:

ಕನಕಪುರ: ತಾಲ್ಲೂಕಿನ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಜೆಡಿಎಸ್‌ ಪಕ್ಷದ ಹಿರಿಯ ಮುಖಂಡ ಕೆ.ಎಲ್‌.ಶಿವಲಿಂಗೇಗೌಡ (93) ಶನಿವಾರ ನಿಧನರಾದರು.

ಮೃತರಿಗೆ ಇಬ್ಬರು ಮಕ್ಕಳು, ಬಂಧುಗಳು ಇದ್ದಾರೆ. 1962 ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದ ಅವರು, 1978 ಮತ್ತು 1985ರಲ್ಲಿ ಪುನರಾಯ್ಕೆ ಆಗಿದ್ದರು.

ಎಸ್.ಕರಿಯಪ್ಪನವರ ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಭಾರತಿ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತರಾಗಿದ್ದು ಬೆಂಗಳೂರಿನ ಜಯನಗರದ ಮನೆಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಯಿತು. ಭಾನುವಾರ ಬೆಳಿಗ್ಗೆ ಕನಕಪುರದ ಆರ್‌ಇಎಸ್‌ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ನಂತರ ಸ್ವಗ್ರಾಮವಾದ ಕಾಡಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !