ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರಹಾಕಿದ ಮಗ! ಈಗ ವೃದ್ಧಾಶ್ರಮವೇ ಆಸರೆ

Last Updated 9 ಜುಲೈ 2021, 1:53 IST
ಅಕ್ಷರ ಗಾತ್ರ

ರಾಮನಗರ: ಮನೆಯನ್ನು ತನ್ನ ಹೆಸರಿಗೆ ಬರೆಯಲು ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡ ‍ಪುತ್ರ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಘಟನೆ ನಗರದ ಸಿಂಗ್ರಿ ಬೋವಿದೊಡ್ಡಿಯಲ್ಲಿ ಜರುಗಿದೆ. ಈ ಘಟನೆಯನ್ನು ಸ್ಥಳೀಯರೊಬ್ಬರು ವಿಡಿಯೊ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೆಎಸ್‍ಆರ್‌ಟಿಸಿ ಬಸ್ ಚಾಲಕ ಕುಮಾರ್ ತಮ್ಮ ತಂದೆ ತಿಮ್ಮಯ್ಯರನ್ನು ಹೀಗೆ ಮನೆಯಿಂದ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನೆಯನ್ನು ಕುಮಾರ್ ಹೆಸರಿಗೆ ಬರೆಯಲು ತಿಮ್ಮಯ್ಯ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಮಗ ತಂದೆಯನ್ನೇ ಎತ್ತಿ ಹೊರಗೆ ಎಸೆದಿದ್ದಾರೆ. ಇದೀಗ ತಿಮ್ಮಯ್ಯ ಬೇರೊಂದು ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ಕುಮಾರ್‌ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದು, ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ಮಗ ಕುಮಾರ್‌ ಅವರನ್ನು ಬಂಧಿಸಿದ್ದಾರೆ. ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದು, ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಗಿರೀಶ್‌ ಟ್ವೀಟ್‌ ಮಾಡಿದ್ದರು. ಮತ್ತೊಂದೆಡೆ, ತಿಮ್ಮಯ್ಯ ಅವರನ್ನು ಕೆ.ಪಿ. ದೊಡ್ಡಿಯಲ್ಲಿ ಇರುವ ದಾರಿದೀಪ ವೃದ್ಧಾಶ್ರಮಕ್ಕೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT