ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಪಹಳ್ಳಿ ಗ್ರಾ.ಪಂ.ಗೆ ಕವಿತಾ ಅಧ್ಯಕ್ಷೆ

Published 28 ಮೇ 2024, 6:22 IST
Last Updated 28 ಮೇ 2024, 6:22 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಎಂ. ಗೋಪಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕವಿತಾ ಭುಜಲಿಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ್ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಕಾರ್ಯಾಲಯದದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹುಚ್ಚಮ್ಮನದೊಡ್ಡಿಯ ಕವಿತಾ ಹಾಗೂ ಕೆ. ಗೋಪಹಳ್ಳಿಯ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಲತಾ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕವಿತಾ 16 ಮತ ಪಡೆದು ಪ್ರತಿಸ್ಪರ್ಧಿ ಲತಾ ಅವರ ವಿರುದ್ಧ 6 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಚೌಕಹಳ್ಳಿಯ ಪ್ರಕಾಶ್ ಹಾಗೂ ಎಂ.ಜಿ. ಪಾಳ್ಯದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವಿನೋದ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಪ್ರಕಾಶ್ 15 ಮತ ಪಡೆದು, ವಿನೋದ್ ವಿರುದ್ಧ 4 ಮತಗಳ ಅಂತರದಿಂದ ಜಯ ಸಾಧಿಸಿದರು. ಪಂಚಾಯಿತಿಯ 26 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ 15 ಹಾಗೂ ಜೆಡಿಎಸ್ ಬೆಂಬಲಿ 11 ಸದಸ್ಯರಿದ್ದರು. ಆದರೆ, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕವಿತಾ ಅವರು 16 ಮತ ಪಡೆದು ಅಚ್ಚರಿ ಮೂಡಿಸಿದರು.

ಚುನಾವಣಾ ಅಧಿಕಾರಿಯಾಗಿ ಅರಣ್ಯ ಇಲಾಖೆಯ ಮಲ್ಲೇಶ್ ಕಾರ್ಯನಿರ್ವಹಿಸಿದರು. ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖಂಡರು ಅಭಿನಂದಿಸಿದರು.

‌ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, ಮುಖಂಡರಾದ ಉಮಾಶಂಕರ್, ರಾಮಚಂದ್ರ, ರಾಧಾಕುಮಾರ್, ಸದಸ್ಯರಾದ ಗೋಪಾಲಗೌಡ, ಆರ್.ಎ. ಗೋಪಾಲ್, ಸರೋಜ ನಾಗರಾಜು, ನೀಲಮ್ಮ, ಶ್ರೀಕಂಠಯ್ಯ, ತಿಮ್ಮಯ್ಯ, ಹುಲಿಯಪ್ಪ, ಶಿವಲಿಂಗಯ್ಯ, ಮಂಜಮ್ಮ, ಮಂಜುಳಾ ರವಿ, ಗೀತಾ ಪುಟ್ಟರಾಜು, ಭವಾನಿ ಕುಮಾರ್, ಸಂಜೀವರೆಡ್ಡಿ, ಉರಗಹಳ್ಳಿ ರಾಜಣ್ಣ, ಸಿದ್ಧರಾಮಯ್ಯ, ಅಪ್ಪಾಜಿಗೌಡ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT