ಹಾರೋಹಳ್ಳಿ: ಬೇಸಿಗೆ ಆರಂಭಕ್ಕೂ ಮುನ್ನವೇ ಅಧಿಕ ತಾಪಮಾನದಿಂದ ಜನ, ಜಾನುವಾರುಗಳು ಆಹಾರ-ನೀರಿಗಾಗಿ ಹಪಹಪಿಸುತ್ತಿವೆ. ಜತೆಗೆ ಕೈಗಾರಿಕಾ ಪ್ರದೇಶದಲ್ಲಿ ನಳನಳಿಸುತ್ತಿದ್ದ ಗಿಡ-ಮರಗಳು ಒಣಗುತ್ತಿದ್ದು, ಹಸಿರು ವಾತಾವರಣಕ್ಕೆ ಕುಂದುಂಟಾಗಿದೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 4ನೇ ಹಂತದಲ್ಲಿ ಅರಣ್ಯ ಇಲಾಖೆಯವರು ಹಾಕಿದ್ದ ಹಲವು ಬಗೆಯ ಗಿಡಗಳು ನಿರ್ವಹಣೆಯಿಲ್ಲದೆ ಒಣಗಿ ಹೋಗಿವೆ. ಸಾಕಷ್ಟು ಖರ್ಚು ಮಾಡಿ ಗಿಡ ನೆಟ್ಟಿದ್ದ ಇಲಾಖೆ ನೀರು ಹಾಕದೆ ಬಿಸಿಲಿಗೆ ಗಿಡಗಳು ಒಣಗುತ್ತಿವೆ.

ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ದಿನನಿತ್ಯ ಗಿಡಗಳಿಗೆ ನೀರು ಹಾಕಿದರೂ ಗಿಡಗಳನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ, ಈಗ ಗಿಡಗಳಿಗೆ ನಿರ್ವಹಣೆ ಇಲ್ಲದಿದ್ದರೆ ಉಳಿಸುವುದು ಹೇಗೆ. ಹಾಗಾಗಿ ಕೈಗಾರಿಕಾ ಅಭಿವೃದ್ಧಿ ಮಂಡಳಿ ಈ ಬಗ್ಗೆ ಗಮನಹರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀರು ಪೂರೈಸುವಂತೆ ಸೂಚಿಸಿ ಗಿಡಗಳನ್ನು ಪೋಷಿಸುವಂತೆ ಮಾಡುವ ಅಗತ್ಯವಿದೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಬೆಟ್ಟ, ಗುಡ್ಡಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುವರು ಹೆಚ್ಚು. ಇದರಿಂದ ಕೈಗಾರಿಕಾ ಪ್ರದೇಶದ ರಸ್ತೆಗಳ ಇಕ್ಕೆಲಗಳಲ್ಲಿ ನೆಟ್ಟಿರುವ ಗಿಡ ಮತ್ತು ಮರಗಳು ಬೆಂಕಿಗಾಹುತಿ ಆಗುವ ಆತಂಕ ಕೂಡ ಉಂಟಾಗಿದೆ. ಹಾಗಾಗಿ ಅರಣ್ಯ ಇಲಾಖೆ ಎಚ್ಚೆತ್ತು ಬೇಸಿಗೆಯಲ್ಲಿ ಗಿಡ–ಮರಗಳಿಗೆ ನೀರು ಪೂರೈಸಿ ರಕ್ಷಿಸಬೇಕಾಗಿದೆ.

ಈ ಬಗ್ಗೆ ಪರಿಶೀಲನೆ ನಡೆಸಿ, ನಿರ್ವಹಣೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
ಲೀಲಾವತಿ, ಕಾರ್ಯನಿರ್ವಾಹಕ ಅಭಿಯಂತರರು, ಹಾರೋಹಳ್ಳಿ ಕೈಗಾರಿಕಾ ಪ್ರದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.