ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ದಿನ: ರೋಟರಿಯಿಂದ ಜನಜಾಗೃತಿ

Published 1 ಅಕ್ಟೋಬರ್ 2023, 11:20 IST
Last Updated 1 ಅಕ್ಟೋಬರ್ 2023, 11:20 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದಲ್ಲಿ ಶನಿವಾರ ‘ಹೃದಯ ದಿನ’ ಆಚರಿಸಲಾಯಿತು. 

ರೋಟರಿ ಮಾಗಡಿ ಸೆಂಟ್ರಲ್‌, ಅಭಯಾ ಪ್ಯಾರಾಮೆಡಿಕಲ್‌ ಕಾಲೇಜು, ವಾಯುವಿಹಾರಿಗಳ ಸಂಘದ ಪದಾಧಿಕಾರಿಗಳು  ಮುಂಜಾನೆ ಸೋಮೇಶ್ವರ ಸ್ವಾಮಿ ದೇವಾಲಯದಿಂದ ತಿರುಮಲೆ ರಂಗನಾಥ ಸ್ವಾಮಿ ದೇವಾಲಯದವರೆಗೆ ಜನಜಾಗೃತಿ ಜಾಥಾ ನಡೆಸಿದರು.‌‌

ರೋಟರಿ ಅಧ್ಯಕ್ಷ ಪ್ರಭಾಕರ್‌.ಎಲ್‌.ಜಾಥಾಗೆ ಚಾಲನೆ ನೀಡಿ ಮಾತನಾಡಿ, ಒತ್ತಡದ ಬದುಕಿನಲ್ಲಿ ಹೃದಯದ ಆರೋಗ್ಯದತ್ತ ಗಮನಿಸದೆ ಇರುವುದು ಹೃದಯಾಘಾತಕ್ಕೆ ಕಾರಣವಾಗಲಿದೆ ಎಂದು ವೈದ್ಯಕೀಯ ವರದಿಗಳು ದೃಢಪಡಿಸಿವೆ. ವಿಶ್ವದಾದ್ಯಂತ ನಡೆದಿರುವ ವೈದ್ಯಕೀಯ ಸಂಶೋಧನೆಗಳು ಕೇವಲ ನಡಿಗೆಯನ್ನು ಮಾತ್ರ ಅತ್ಯುತ್ತಮವಾದ ದೈಹಿಕ ಚಟುವಟಿಕೆ ಎಂದು ದೃಢಪಡಿಸಿವೆ. ಹೃದಯದ ಆರೋಗ್ಯದತ್ತ ನಾವೆಲ್ಲರೂ ಗಮನ ಹರಿಸಬೇಕಿದೆ ಎಂದರು.

ಡಾ.ಮಂಜುನಾಥ್‌ ಬೆಟಗೇರಿ ಮಾತನಾಡಿ ಹಣಗಳಿಸುವ ಧಾವಂತದಲ್ಲಿ ಆರೋಗ್ಯದತ್ತ ನಿರ್ಲಕ್ಷ್ಯವಹಿಸುವುದು ಸರಿಯಲ್ಲ ಎಂದರು.

ನಿವೃತ್ತ ಸೇನಾಧಿಕಾರಿ ಶಿವಲಿಂಗಯ್ಯ ಮಾತನಾಡಿ, ನಡಿಗೆ ಎಲ್ಲಾ ವಯೋಮಾನದವರಿಗೂ ಮಾಡಬಹುದಾದ ಸರಳ ಮತ್ತು ಸುರಕ್ಷಿತ ದೈಹಿಕ ಚಟುವಟಿಕೆಯಾಗಿದೆ. ನಡಿಗೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂಬುದು ವೈದ್ಯರ ಅನುಭವದ ಮಾತು ಎಂದರು.

ಅಭಯಾ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸುಧೀಂದ್ರ, ರೋಟರಿ ಕಾರ್ಯದರ್ಶಿ ಶಂಕರ್‌, ಸಿದ್ಢಾರೂಢಾಶ್ರಮದ ಕದಂಬ ಗಂಗರಾಜು, ರೊಟೇರಿಯನ್‌ಗಳಾದ ಲಕ್ಷ್ಮೀಪ್ರಸಾದ್‌, ಶಿವಣ್ಣ, ನರಸಿಂಹಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷೆ ಕಲ್ಪನಾ ಶಿವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT