ಮಾಗಡಿ: ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಪರವಾಗಿ ತಾಲ್ಲೂಕಿನ ತಾಳೇಕೆರೆ ಹ್ಯಾಂಡ್‌ಪೋಸ್ಟ್‌ನಲ್ಲಿ ಬುಧವಾರ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ, ಬೆಂಗಳೂರು–ಮಂಗಳೂರು ಹೆದ್ದಾರಿ ತಡೆಯಲು ಯತ್ನಿಸಿದ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಕೆಲ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ವಿವಿಧ ಮಠಾಧೀಶರು ಹಾಗೂ ಸಂಘಟನೆಗಳು ಮುಖಂಡರು ಸಹ ಪಾಲ್ಗೊಂಡಿದ್ದ ಪ್ರತಿಭಟನೆಯಲ್ಲಿ, ‘ನಮ್ಮ ನೀರು ನಮ್ಮ ಹಕ್ಕು’, ‘ಹೇಮಾವತಿ ನಮ್ಮ ಹಕ್ಕು’ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸಭೆ ಬಳಿಕ ಚಂದ್ರಶೇಖರ್ ಸೇರಿದಂತೆ ಕೆಲ ಮುಖಂಡರು ಹೆದ್ದಾರಿ ತಡೆಯಲು ಯತ್ನಿಸಿದರು.

‘ಹೆದ್ದಾರಿ ತಡೆಗೆ ಅನುಮತಿ ಕೊಡುವುದಿಲ್ಲ’ ಎಂದು ಮಾಗಡಿ ಇನ್‌ಸ್ಪೆಕ್ಟರ್ ಗಿರಿರಾಜ್ ಅವರು ಚಂದ್ರಶೇಖರ್ ಅವರ ಮನವೊಲಿಸಲು ಯತ್ನಿಸಿದರು. ಆದರೂ, ಮುಖಂಡರು ಪೊಲೀಸರ ಮಾತಿಗೆ ಕಿಮ್ಮತ್ತು ಕೊಡದೆ, ‘ನಮ್ಮ ಹಕ್ಕಿಗಾಗಿ, ಹೆದ್ದಾರಿ ತಡೆದೇ ಪ್ರತಿಭಟನೆ ನಡೆಸುತ್ತೇವೆ. ಬೇಕಿದ್ದರೆ ಬಂಧಿಸಿ’ ಎಂದು ಸವಾಲು ಹಾಕಿ ಹೆದ್ದಾರಿಯತ್ತ ಹೊರಡಲು ಮುಂದಾದರು. ಆಗ ಪೊಲೀಸರು ಚಂದ್ರಶೇಖರ್ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದರು. ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದರು.

ಡಿಸಿಎಂ ಗಮನ ಕೊಡಲಿ: ಬಳಿಕ ಮಾತನಾಡಿದ ಚಂದ್ರಶೇಖರ್, ‘ಜಲ ಸಂಪನ್ಮೂಲ ಸಚಿವರೂ ಆರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಜಿಲ್ಲೆಯ ಮಾಗಡಿ ತಾಲ್ಲೂಕಿನ ರೈತರಿಗೆ ಆಗುತ್ತಿರುವ ಅನ್ಯಾಯದ ಕಡೆಗೂ ಗಮನ ಹರಿಸಬೇಕು. ಇಲ್ಲಿನ ಜನರ ನೀರಿನ ಹಕ್ಕಿನ ವಿರುದ್ಧ ಎದ್ದಿರುವ ವಿರೋಧವನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಒತ್ತಾಯಿಸಿದರು.

‘ನಿಮ್ಮ ಇಲಾಖೆಯ ಯೋಜನೆ ಬಗ್ಗೆ ತುಮಕೂರಿನ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಯೋಜನೆಯ ಕಾಮಗಾರಿ ಚಾಲನೆ ನೀಡಿದ ಮೇಲೆ ಕಾಮಗಾರಿಯನ್ನು ಪೂರ್ಣ ಮಾಡುವ ಜವಾಬ್ದಾರಿ ಸಂಬಂಧಿಸಿದ ಸಚಿವರದ್ದು. ಹೇಮಾವತಿ ಯೋಜನೆಯನ್ನು ಪೂರ್ಣ ಮಾಡಲು ತುಮಕೂರಿನಲ್ಲಿರುವ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ಯೋಜನೆಯನ್ನು ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಹೇಮಾವತಿ ಯೋಜನೆ, ಎತ್ತಿನಹೊಳೆ ಯೋಜನೆ ಸೇರಿದಂತೆ ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳು ವಿಳಂಬವಾಗಿವೆ. ಹೀಗಾದರೆ, ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹೇಗೆ ಸಾಧ್ಯ? ಸಚಿವರು ರಾಜಕೀಯ ಬಿಟ್ಟು ರೈತರ ಕಡೆಗೂ ಗಮನ ಕೊಡಬೇಕು. ಇಲ್ಲದಿದ್ದರೆ, ಸರ್ಕಾರ ವಿರುದ್ಧ ಹೋರಾಟ ಮಾಡಲಾಗುವುದು’ ಎಂದರು.

ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಗೋವಿಂದರಾಜು, ಗದ್ದಿಗೆ ಮಠದ ಮಹಾಂತ ಸ್ವಾಮೀಜಿ, ಬಂಡೆ ಮಠದ ಮಹಾಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಪದ್ಮನಾಭ್, ಮುಖಂಡರಾದ ಶಿವರಾಜು, ವೆಂಕಟೇಶ್, ಮರಿಗೌಡ, ವಿದ್ಯಾರ್ಥಿ ಮಿತ್ರ ಕಿರಣ್, ಮಂಜುನಾಥ್, ವೆಂಕಟಪ್ಪ, ಕೃಷ್ಣಮೂರ್ತಿ, ಲೆಂಕಪ್ಪ, ನಾರಾಯಣ್ ಹಾಗೂ ಇತರರು ಇದ್ದರು.

- ‘ಕಾಮಗಾರಿ ಪರ ಟ್ರಾಕ್ಟರ್ ಚಲೋ ಎಚ್ಚರಿಕೆ

’ ‘ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿಷಯದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೆಜ್ಜೆ ಇಡಬಾರರದು. ಯೋಜನೆ ವಿರುದ್ಧ ಹೋರಾಡುತ್ತಿರುವ ತುಮಕೂರಿನ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳು ಸಂಘ–ಸಂಘಟನೆಗಳ ಮುಖಂಡರು ಹಾಗೂ ಸ್ವಾಮೀಜಿಗಳ ಜೊತೆ ಸರ್ಕಾರ ಮಾತುಕತೆ ನಡೆಸಿ ಬಗೆಹರಿಸಬೇಕು. ಇಲ್ಲದಿದ್ದರೆ ಮಾಗಡಿಯಿಂದ ವಿಧಾನಸೌಧದವರೆಗೆ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಟ್ರಾಕ್ಟರ್ ಚಲೋ ಹಮ್ಮಿಕೊಳ್ಳಲಾಗುವುದು’ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು. ಯೋಜನೆಗೆ ವಿರೋಧ ಸಲ್ಲದು: ಸ್ವಾಮೀಜಿ ‘ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಗೆ ಬೇಗನೆ ಚಾಲನೆ ನೀಡಬೇಕು ಎಂದು ತಾಳೆಕೆರೆ ಹ್ಯಾಂಡ್‌ಪೋಸ್ಟ್‌ನಲ್ಲಿ ಕಳೆದ ವರ್ಷ ನಡೆದಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೇವು. ಕಾಮಗಾರಿ ಶುರುವಾಗುತ್ತಿದ್ದಂತೆ ತುಮಕೂರಿನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ತಾಲ್ಲೂಕಿನ ಜಲಾಶಯಗಳು ಬೆಂಗಳೂರಿನವರಿಗೆ ನೀರು ಕೊಡುತ್ತಿವೆ. ಆದರೆ ನಮಗೆ ಹೇಮಾವತಿ ನೀರು ಹರಿಸಲು ತುಮಕೂರಿನವರು ಅಡ್ಡಿ ಮಾಡುತ್ತಿರುವುದು ಸರಿಯಲ್ಲ. ನಮ್ಮ ನೀರಿನ ಹಕ್ಕನ್ನು ಕೇಳುತ್ತಿದ್ದೇವೆ. ಅದು ಹೋರಾಟದ ಮೂಲಕವೇ ಸಿಗಬೇಕು ಎಂದಿದ್ದರೆ ನಾವು ಅದಕ್ಕೂ ತಯಾರಿದ್ದೇವೆ. ನಮ್ಮ ತಾಲ್ಲೂಕಿನ ಜನರ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆ’ ಎಂದು ಜಗಣ್ಣಯ್ಯ ಮಠದ ಚೆನ್ನಬಸವ ಸ್ವಾಮೀಜಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.