ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಳವು: ಆರೋಪಿಗಳ ಸೆರೆ, ಚಿನ್ನಾಭರಣ, ನಗದು ವಶ

Published 27 ಫೆಬ್ರುವರಿ 2024, 5:27 IST
Last Updated 27 ಫೆಬ್ರುವರಿ 2024, 5:27 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಸುಂಡಘಟ್ಟ ಗ್ರಾಮದಲ್ಲಿ ಫೆ. 2ರಂದು ಶಿವಪ್ಪ ಎಂಬುವರ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ನಗದು, ಆಭರಣ ವಶಪಡಿಸಿಕೊಂಡಿದ್ದಾರೆ. 

ಕನಕಪುರದ ಐಬಿ ಬಡಾವಣೆ, ಪ್ರಶಾಂತ ನಗರದ ನಿವಾಸಿ ಕೆ.ವಿ.ಕೃ‍ಷ್ಣ (42) ಶಿವನಹಳ್ಳಿ ಗ್ರಾಮದ ನಿವಾಸಿ ಮಲ್ಲೇಶ್‌ (33), ಕನಕಪುರ ಅಂಬೇಡ್ಕರ್‌ ನಗರದ ನಿವಾಸಿ ಮಲ್ಲೇಶ್‌ (35), ಕನಕಪುರ ನವಾಜಿ ಬೋರೆ ನಿವಾಸಿ ವಿಶ್ವನಾಥ (35) ಬಂಧಿತರು. 

ಕೋಡಿಹಳ್ಳಿ ಪೊಲೀಸರು ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ.ಕೆ.ಎಲ್‌ ನೇತೃತ್ವದ ತಂಡವು ತನಿಖೆ ನಡೆಸಿ ಫೆ. 19ರಂದು ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.  ಪೊಲೀಸ್‌ ಕಸ್ಟಡಿಗೆ ಪಡೆದು ಆರೋಪಿಗಳಿಂದ 157 ಗ್ರಾಂ ಚಿನ್ನಾಭರಣ. 50 ಗ್ರಾಂ ಬೆಳ್ಳಿ, ಮೂರೂವರೆ ಲಕ್ಷ ನಗದು ವಶಪಡಿಸಿಕೊಂಡಿದ್ದರು.

ಬಂಧಿತ ಆರೋಪಿಗಳು ಹಣದ ಸಮಸ್ಯೆಯಿಂದ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.  ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು 

ಶಿವನಹಳ್ಳಿ ಮಲ್ಲೇಶ್‌
ಶಿವನಹಳ್ಳಿ ಮಲ್ಲೇಶ್‌
ಮಲ್ಲೇಶ್‌
ಮಲ್ಲೇಶ್‌
ವಿಶ್ವನಾಥ್‌
ವಿಶ್ವನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT