ಹಾರೋಹಳ್ಳಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇಲ್ಲಿಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ಉತ್ಸವ ಆಚರಣೆಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಆರು ಮಂದಿ ವಿರುದ್ಧ ಹಾರೋಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾರಂಭದ ವೇದಿಕೆಯಲ್ಲಿ ಹಾಗೂ ಕಚೇರಿಗೆ ಧಾವಿಸಿ ತಹಶೀಲ್ದಾರ್ ಹರ್ಷವರ್ಧನ್ ಅವರೊಂದಿಗೆ ಏರು ಧ್ವನಿಯಲ್ಲಿ ವಾಗ್ವಾದಕ್ಕಿಳಿದ ಆರೋಪದ ಮೇಲೆ ವಾಲೆ ವೆಂಕಟೇಶ್, ಚಂದ್ರು, ಪ್ರಕಾಶ್, ಅಂಜನ್ ಮೂರ್ತಿ, ದೇವರಾಜು,ಕುಮಾರ್ ಎನ್ನುವವರ ವಿರುದ್ಧ ಕಂದಾಯ ನಿರೀಕ್ಷಕ ಬಿ.ಎನ್. ನರೇಶ್ ನೀಡಿದ ದೂರಿನ ಮೇರೆಗೆ ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಮಾರಂಭ ಮುಕ್ತಾಯ ಹಂತದ ವೇಳೆ ವೇದಿಕೆಗೆ ಧಾವಿಸಿದ ಆರು ಮಂದಿ ತಮಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಧಿಕ್ಕಾರ ಕೂಗಿದರು. ಆಚರಣೆಗೆ ಅಡ್ಡಿಪಡಿಸಿದರು ಎಂದು ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.