ರಾಮನಗರ: ಮುಡಾ ಹಗರಣ ವಿರೋಧಿಸಿ ಜೆಡಿಎಸ್- ಬಿಜೆಪಿ ನಡೆಸುತ್ತಿರುವ ಜಂಟಿ ಪಾದಯಾತ್ರೆಯಲ್ಲಿ ಜೆಡಿಎಸ್ ಕಾರ್ಯಕರ್ತೆ ಬೆಂಗಳೂರು ಮೂಲದ ಗೌರಮ್ಮ ಎಂಬಾಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಮೃತರ ಅಂತಿಮ ದರ್ಶನವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ.
ಇದೇ ವೇಳೆ ಮತ್ತೊಬ್ಬ ಪಾದಯಾತ್ರಿ ಸಹ ವಾಂತಿ ಮಾಡಿಕೊಂಡು ಆಸ್ವಸ್ಥರಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.