ಸರ್ಕಾರ ಮಾತೃಭಾಷೆ ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣ ಉದ್ಯೋಗ ಹಾಗೂ ಬದುಕು ಕೊಡಬೇಕು. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ಕನ್ನಡಪರ ಸಂಘಟನೆಗಳ ದನಿಗೆ ಬೆಲೆ ಬರಲಿದೆ
– ಪಿ. ಕೃಷ್ಣೇಗೌಡ ರಾಜ್ಯಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ
‘ಕದಂಬ ಪ್ರಶಸ್ತಿ’ ಪ್ರದಾನ
ಕಾರ್ಯಕ್ರಮದಲ್ಲಿ ಸಂತೋಷ್ ಮಂಜು ಟಿ.ಜಿ. ವೆಂಕಟೇಶ್ ಪ್ರಸಾದ್ ಮಲ್ಲೇಶ್ ವಿಷಕಂಠಯ್ಯ ಶಿವಹೊಂಬಯ್ಯ ಮುನಿಯಪ್ಪ ಸುಮಂಗಳ ಅಂಕನಹಳ್ಳಿ ಶಿವಣ್ಣ ನಾಗೇಶ್ ಪಿ.ಎಸ್. ದಿಗಂತ್ ಗೌಡ ಹಿರಿಯ ಪತ್ರಕರ್ತ ಬಿ.ವಿ. ಸೂರ್ಯಪ್ರಕಾಶ್ ಪವರ್ ಟಿ.ವಿ ಜಿಲ್ಲಾ ವರದಿಗಾರ ಪ್ರವೀಣ್ ಶಶಿಕುಮಾರ್ ಸುಶೀಲಮ್ಮ ಟೇಕ್ವಾಂಡೆ ಕ್ರೀಡಾಪಟು ಶಾನ್ವಿ ಸತೀಶ್ ಮಲ್ಲೇಶ್ ಹಾಗೂ ವಾರುಣಿ ಅವರಿಗೆ ಗಣ್ಯರು ‘ಕದಂಬ ಪ್ರಶಸ್ತಿ’ ನೀಡಿ ಗೌರವಿಸಿದರು.