ಗುರುವಾರ , ಫೆಬ್ರವರಿ 25, 2021
19 °C
CHANNPATNA

‘ಕಣ್ವ ನೀರಾವರಿ ಯೋಜನೆ ರೂಪಿಸಿದ್ದು ಯೋಗೇಶ್ವರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಕೆರೆಗಳಲ್ಲಿ ನೀರಿದ್ದರೆ ಮಾತ್ರ ಗ್ರಾಮಗಳಲ್ಲಿ ಸಮೃದ್ಧಿ ಕಾಣಲು ಸಾಧ್ಯ ಎಂದು ಮುಖಂಡ ಸಿ.ಪಿ.ರಾಜೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಳೂರುಪಟ್ಟಣ ಕೆರೆಗೆ ಸೋಮವಾರ ಬಾಗಿನ ಸಲ್ಲಿಸಿ ಮಾತನಾಡಿದರು. ಒಂದು ಗ್ರಾಮದ ಕೆರೆಯಲ್ಲಿ ನೀರು ಇದ್ದರೆ ಗ್ರಾಮಸ್ಥರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸ್ವಾವಲಂಬಿಗಳಾಗುತ್ತಾರೆ. ಗ್ರಾಮಸ್ಥರು ಕೆರೆ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕೃಷಿ ಆಧಾರಿತ ಮತ್ತು ತೋಟಗಾರಿಕೆ ಬೆಳೆ ಬೆಳೆಯಲು ಕೃಷಿ ಇಲಾಖೆಯಿಂದ ಸಹಾಯ ಧನ ಸಿಗುತ್ತದೆ. ಈ ಬಗ್ಗೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು. ನರೇಗಾ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಣ್ವ ಏತ ನೀರಾವರಿ ಯೋಜನೆಯಿಂದ ಕೆರೆಗಳು ಭರ್ತಿಯಾಗಿವೆ. ರೈತರು ಹನಿ ನೀರಾವರಿ, ಸಣ್ಣ ನೀರಾವರಿ ಅಳವಡಿಸಿಕೊಂಡು‌ ಸದ್ಬಳಕೆಗೆ ಮುಂದಾಗಬೇಕೆಂದು ತಿಳಿಸಿದರು.

ನೀರಾವರಿ ಯೋಜನೆ ರೂಪಿಸಿದ ಯೋಗೇಶ್ವರ್: ತಾಲ್ಲೂಕಿನ ರೈತರ ಕಷ್ಟ ಅರಿತು ಆಗಿನ ಶಾಸಕ ಸಿ.ಪಿ.ಯೋಗೇಶ್ವರ್ ಕಣ್ವ ಏತ ನೀರಾವರಿ ರೂಪಿಸಿದರು ಎಂದು ಅವರ ಸೋದರ ಸಿ.ಪಿ.ರಾಜೇಶ್ ಹೇಳಿದರು.

ಕೆರೆಗಳನ್ನು ತುಂಬಿಸಿದ ಹಿನ್ನೆಲೆಯಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ. ಬತ್ತಿಹೋದ ಕೊಳವೆ ಬಾವಿಗಳು ಪುನಶ್ಚೇತನಗೊಂಡಿವೆ. ಇದರಿಂದ ರೈತರು ಕೃಷಿ ಮತ್ತು ತೋಟಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಲು ಸಹಾಯಕವಾಗಿದೆ ಎಂದು ತಿಳಿಸಿದರು

ಮಳೂರುಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಕುಮಾರ್, ಮುಖಂಡರಾದ ಮಳೂರುಪಟ್ಟಣ ಕುಮಾರ್, ಶೋಭಾ, ಪಿಡಿಒ ಶ್ರೀದೇವಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಡಿ.ಚಾಮರಾಜು, ಮುಖಂಡರಾದ ಶಿವಲಿಂಗಯ್ಯ, ಸಿದ್ದಪ್ಪ, ಪುಟ್ಟೀರೇಗೌಡ, ಚನ್ನಮ್ಮ, ನಂಜೇಶ್, ಕರಿಯಪ್ಪ, ಚೌಡಯ್ಯ, ಮುದ್ದು, ಎಂ.ಎಲ್.ಪುಟ್ಟಪ್ಪ, ಎಂ.ಕೆ.ಕಾಂತರಾಜು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.