ಮಾಗಡಿ: ಪುರಸಭೆ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಡೂಮ್ ವೃತ್ತದಲ್ಲಿ ಮಂಗಳವಾರ ಆರ್.ಆರ್.ರಸ್ತೆ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಪ್ರತಿಮೆ ಸ್ಥಳಾಂತರಕ್ಕೆ ಕೆಂಪೇಗೌಡ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಅವರು ತೀವ್ರ ವಿರೋಧಕ್ಕೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಹೈಕೋರ್ಟ್ನಲ್ಲಿ ಆಸ್ಪತ್ರೆ ನಿರ್ಮಾಣದ ಹಿನ್ನೆಲೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ ಎಂಬ ಮಹತ್ವದ ಕಾರಣ ನೀಡಿದ ಹಿನ್ನೆಲೆ ಹೈಕೋರ್ಟ್ ಪ್ರತಿಮೆ ಸ್ಥಳಾಂತರಕ್ಕೆ ಆದೇಶ ನೀಡಿದೆ ಎಂದರು.

‘ಪ್ರತಿಮೆ ಸ್ಥಳಾಂತರ ಮಾಡಿ ನನ್ನ ಮನೆಯ ಬಂಗಲೆ ಕಟ್ಟಿಸುತ್ತಿಲ್ಲ. ಬಡವರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿಮೆಯನ್ನು ನಾವು ನಿರ್ಲಕ್ಷ್ಯ ಮಾಡುತ್ತಿಲ್ಲ. ಅದನ್ನು ಸರಿಯಾಗಿ ಸ್ಥಳಾಂತರ ಮಾಡಿ ಗೌರವ ಸಲ್ಲಿಸಲಾಗುವುದು’ ಎಂದರು.

‘400ಕ್ಕೂ ಹೆಚ್ಚು ಮರಗಳನ್ನು ಕಡಿಯುತ್ತಿಲ್ಲ. ಚಿಕ್ಕ ಚಿಕ್ಕ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಬಡವರಿಗೆ ಅನುಕೂಲ ಮಾಡುವುದು ನಮಗೆ ಮುಖ್ಯ’ ಎಂದರು.

ಪಟ್ಟಣದ ಗೌರಮ್ಮನ ಕೆರೆಯನ್ನು ₹15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 9 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಪ್ರತಿ ತಿಂಗಳು ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದೇನೆ. ಮಾಗಡಿ ತಿರುಮಲೆ ಮುಖ್ಯರಸ್ತೆ ಕಾಮಗಾರಿ ವಿಳಂಬವಾಗಿದ್ದು ಕೂಡಲೇ ಗುತ್ತಿಗೆದಾರರು ಕಾಮಗಾರಿ ಮುಗಿಸಬೇಕೆಂದು ಸೂಚಿಸಲಾಗಿದೆ. ಗೌರಮ್ಮನಕೆರೆ ಅಭಿವೃದ್ಧಿಯಿಂದ ಜನತೆಗೆ ಅನುಕೂಲವಾಗಲಿದೆ ಎಂದರು.

ಪಟ್ಟಣದ ಅಂಬೇಡ್ಕರ್ ಭವನದಿಂದ ಕೆಂಪೇಗೌಡ ವೃತ್ತದವರೆಗೂ ರಸ್ತೆಯ ಎರಡು ಕಡೆ ಪಾದಾಚಾರಿ ಮಾರ್ಗವನ್ನು ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಡೂಮ್ಲೈಟ್ ವೃತ್ತವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಪುರಸಭೆ ಉಪಾಧ್ಯಕ್ಷ ರಿಯಾಜ್, ಪೊಲೀಸ್ ವಿಜಿ, ಗಣೇಶ್, ಶಿವಪ್ರಸಾದ್, ನಿವೃತ್ತ ಅಧಿಕಾರಿ ನಂಜಯ್ಯ, ಪುರುಷೋತ್ತಮ್, ಬ್ಯಾಲಕೆರೆ ಚಿಕ್ಕರಾಜು, ಚಕ್ರಬಾವಿ ನಾಗರಾಜು ಸೇರಿದಂತೆ ಇತರರು ಇದ್ದರು.

ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ಸೇರಿಸುವ ಬಗ್ಗೆ ನನಗೇನು ಮಾಹಿತಿ ಇಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ಕುಣಿಗಲ್ ನಮ್ಮ ಜಿಲ್ಲೆಗೆ ಸೇರಿದರೆ ಒಳ್ಳೆಯದು
ಎಚ್.ಸಿ.ಬಾಲಕೃಷ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.