ಭಾನುವಾರ, ಜುಲೈ 3, 2022
27 °C
4 ಸಾವಿರ ಕ್ರೀಡಾಪಟುಗಳು ಭಾಗಿ

ಖೇಲೊ ಇಂಡಿಯಾ ವಿ.ವಿ ಕ್ರೀಡಾಕೂಟ ಆರಂಭ

ಬರಡನಹಳ್ಳಿ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ತಾಲ್ಲೂಕಿನ ಜೈನ್‌ ಯೂನಿರ್ವಸಿಟಿಯಲ್ಲಿ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟವು ಏ. 24ರಿಂದ ಆರಂಭವಾಗುತ್ತಿದ್ದು, ಸಿದ್ಧತೆ ಪೂರ್ಣಗೊಂಡಿದೆ.

ಕ್ರೀಡಾಕೂಟವು ಮೇ 3ರಂದು ಮುಕ್ತಾಯವಾಗಲಿದೆ. ಜೈನ್‌ ವಿಶ್ವವಿದ್ಯಾಲಯದಲ್ಲಿ ಶನಿವಾರದಿಂದಲೇ ಪ್ರಾರಂಭವಾಗಿದ್ದು ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಧ್ಯುಕ್ತ ಚಾಲನೆ
ಸಿಗಲಿದೆ.

ಜಕ್ಕಸಂದ್ರ ಬಳಿಯಿರುವ ಜೈನ್‌ ವಿಶ್ವವಿದ್ಯಾನಿಲಯ ಮತ್ತು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಸಮೀಪದ ಜೈನ್‌ ಸ್ಪೋರ್ಟ್ಸ್‌ ಕಾಲೇಜಿನಲ್ಲಿ ಕ್ರೀಡೆಗಳು ನಡೆಯಲಿವೆ. ಒಟ್ಟು 16 ಕ್ರೀಡೆಗಳು ತಾಲ್ಲೂಕಿನಲ್ಲಿ ನಡೆಯುತ್ತಿದ್ದು ವಿಶ್ವವಿದ್ಯಾಲಯದಲ್ಲಿ 13 ಗೇಮ್‌, ಜೈನ್‌ ಸ್ಪೋರ್ಟ್ಸ್‌ ಕಾಲೇಜಿನಲ್ಲಿ 3 ಗೇಮ್‌ಗಳು ನಡೆಯುತ್ತವೆ.

ವಿವಿಧ ರಾಜ್ಯದ 200 ಯೂನಿರ್ವಸಿಟಿಗಳಿಂದ ಒಟ್ಟು 4,000 ಕ್ರೀಡಾಪಟುಗಳು ಜೈನ್‌ ವಿಶ್ವವಿದ್ಯಾನಿಲಯದಲ್ಲಿ ಹೆಸರು ನೋಂದಾಯಿಸಿದ್ದಾರೆ. ರೆಫ್ರಿ, ಕೋಚ್‌, ಅಂಪೈರ್‌ ಸೇರಿದಂತೆ ಒಟ್ಟು 3 ಸಾವಿರ ಮಂದಿ ಕ್ರೀಡೆಗಳನ್ನು ನಡೆಸಿಕೊಡಲಿದ್ದಾರೆ. ಇವರೆಲ್ಲರು ಉಳಿದುಕೊಳ್ಳಲು ವಿಶ್ವವಿದ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಮಾರೋಪ ಸಮಾರಂಭ ಮೇ 3ರಂದು ಯೂನಿರ್ವಸಿಟಿಯಲ್ಲೇ ನಡೆಯಲಿದೆ. ಅಂದಿನ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸುವ ನಿರೀಕ್ಷೆಯಿದೆ. ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಕ್ರೀಡಾ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಜೈನ್‌ ವಿವಿಯ ಆಡಳಿತ ಮಂಡಳಿ ಸಜ್ಜಾಗಿದೆ. 10 ದಿನಗಳ ಕಾಲ ನಡೆಯುವ ಕ್ರೀಡಾಕೂಟದ ಜವಾಬ್ದಾರಿಯನ್ನು ಜೈನ್‌ ಗ್ರೂಪ್ಸ್‌ ಹೊತ್ತಿದೆ. ವಿವಿಯ ಒಳಗೆ ಹೋಗಲು ಪಾಸ್‌ ಕಡ್ಡಾಯ ಮಾಡಲಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು