ರಾಮನಗರ: ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದಲ್ಲಿ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿದೆ. ಇದೇ ಚಿರತೆ ಬಾಲಕನನ್ನು ಕೊಂದಿರಬಹುದುಎಂದು ಶಂಕಿಸಲಾಗಿದೆ.

ಚಿರತೆ ಸೆರೆಗೆ ಅರಣ್ಯ ಇಲಾಖೆ ಗ್ರಾಮದ ಸುತ್ತ ಆರು ಬೋನುಗಳನ್ನು ಇರಿಸಿತ್ತು. ಎರಡು ತಂಡಗಳನ್ನು ನರಭಕ್ಷಕ ಚಿರತೆಯಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಚಿರತೆ ಸೆರೆಯಾದ ಹಿನ್ನೆಲೆಯಲ್ಲಿ ಮಾಗಡಿ ತಾಲ್ಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಬೋನನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಆದರೆ, ಸೆರೆಯಾದ ಎರಡು ವರ್ಷದ ಗಂಡು ಚಿರತೆಯೇ ಮಗುವನ್ನು ಕೊಂದಿದೆ ಎಂಬುದು ಇನ್ನೂ ಧೃಡಪಟ್ಟಿಲ್ಲ. ಹೀಗಾಗಿ ಅದರ ಪಾದದ ಗುರುತಿನ ಆಧಾರದ ಮೇಲೆ ನರಭಕ್ಷಕ ಚಿರತೆ ಗುರುತಿಸುವ ಕಾರ್ಯ ನಡೆಯಲಿದೆ. ಇನ್ನೂ ಎರಡು ದಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.