ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ₹ 5.30 ಕೋಟಿ ಇದ್ದ ಬ್ಯಾಂಕ್‌ ವಾಹನ ವಶಕ್ಕೆ

Published 22 ಮಾರ್ಚ್ 2024, 14:45 IST
Last Updated 22 ಮಾರ್ಚ್ 2024, 14:45 IST
ಅಕ್ಷರ ಗಾತ್ರ

ರಾಮನಗರ: ಸಮಪರ್ಕ ದಾಖಲೆಗಳಿಲ್ಲದೆ ₹5.30 ಕೋಟಿ ಸಾಗಿಸುತ್ತಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಹಣ ಸಾಗಿಸುವ ವಾಹನವನ್ನು ತಾಲ್ಲೂಕಿನ ಹೆಜ್ಜಾಲ ಸಮೀಪದ ಬೆಂಗಳೂರು–ಮೈಸೂರು ಹೆದ್ದಾರಿ ಕಣಮಿಣಕಿ ಟೋಲ್ ಪ್ಲಾಜಾ ಬಳಿ ಚುನಾವಣಾ ಚೆಕ್‌ಪೋಸ್ಟ್ ಸಿಬ್ಬಂದಿ ಶುಕ್ರವಾರ ತಡೆದು ವಶಕ್ಕೆ ಪಡೆದರು.

ಬ್ಯಾಂಕ್‌ನ ಶಾಖೆಗಳಿಗೆ ತಲುಪಿಸಲು ವಾಹನದಲ್ಲಿ ಹಣ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ, ವಾಹನ ತಡೆದು ವಿಚಾರಿಸಿದೆವು. ಅವರು ತೋರಿಸಿದ ದಾಖಲೆಗಳು ಸಮರ್ಪಕವಾಗಿಲ್ಲದ್ದರಿಂದ, ವಾಹನವನ್ನು ವಶಕ್ಕೆ ಪಡೆದು ದಾಖಲೆಗಳನ್ನು ತಂದು ತೋರಿಸಿ ಕೊಂಡೊಯ್ಯುವಂತೆ ಸೂಚಿಸಿದೆವು. ಕೆಲ ತಾಸಿನ ಬಳಿಕ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ತಂದು ತೋರಿಸಿ ವಾಹನವನ್ನು ಕೊಂಡೊಯ್ದರು ಎಂದು ಬಿಡದಿ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT