ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ಮತದಾನ ಹೆಚ್ಚಳ: ಯಾರಿಗೆ ಲಾಭ? ಯಾರಿಗೆ ನಷ್ಟ?

ರಿಲ‍್ಯಾಕ್ಸ್‌ ಮೂಡಿನಲ್ಲಿ ಅಭ್ಯರ್ಥಿಗಳು- ಸೋಲು, ಗೆಲುವಿನ ಲೆಕ್ಕಾಚಾರ ಜೋರು
Published 28 ಏಪ್ರಿಲ್ 2024, 6:48 IST
Last Updated 28 ಏಪ್ರಿಲ್ 2024, 6:48 IST
ಅಕ್ಷರ ಗಾತ್ರ

ಕನಕಪುರ: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನ ಶುಕ್ರವಾರ ಮುಗಿದಿದ್ದು ರಾಜಕೀಯ ಮುಖಂಡರು ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. 

ಯಾವ ಮತಗಟ್ಟೆಯಲ್ಲಿ ಯಾರಿಗೆ ಎಷ್ಟು ಮತ ಸಿಕ್ಕಿವೆ. ಯಾರಿಗೆ ಎಷ್ಟು ಲೀಡ್‌ ಬಂದಿದೆ ಎಂಬ ಲೆಕ್ಕಚಾರದಲ್ಲಿ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ತೊಡಗಿದ್ದಾರೆ.

ಡಿ.ಕೆ. ಶಿವಕುಮಾರ ಮತ್ತು ಗೌಡರ ಕುಟುಂಬದ ನಡುವಿನ ಜಿದ್ದಾಜಿದ್ದಿನಿಂದ ಹೈ ವೊಲ್ಟೇಜ್ ಅಖಾಡವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. ಇದರೊಂದಿಗೆ ಡಿ.ಕೆ. ಸಹೋದರರ ತವರು ಕ್ಷೇತ್ರ ಕನಕಪುರ ಕೂಡ ಕಡಿಮೆ ಸದ್ದು ಮಾಡಲಿಲ್ಲ.  

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತಗಳು ಚಲಾವಣೆಯಾಗಿವೆ. 2019ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 82ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.85 ರಷ್ಟು (1,96,037) ಮತದಾನವಾಗಿದೆ.

ಹೆಚ್ಚು ಮತ ಚಲಾವಣೆ ಯಾರಿಗೆ ಲಾಭ ತಂದುಕೊಡಲಿದೆ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ಶುರುವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಡಿ.ಕೆ. ಸುರೇಶ ಅವರಿಗೆ 1,40,490, ಬಿಜೆಪಿಯ ಅಶ್ವತ್ಥನಾರಾಯಣ ಅವರಿಗೆ 32,924 ಮತ ಲಭಿಸಿದ್ದವು. ಆದರೆ, ಈ ಬಾರಿ ಬಿಜೆಪಿ ಜತೆ ಜೆಡಿಎಸ್‌ ದೋಸ್ತಿ ಮಾಡಿದೆ. ಹಾಗಾಗಿ ರಾಜಕೀಯ ಲೆಕ್ಕಾಚಾರ ಬದಲಾಗಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT