ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

Published 7 ಮಾರ್ಚ್ 2024, 6:24 IST
Last Updated 7 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಮರಳಗೊಂಡಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುಳ ಗಂಗರಾಜು, ಉಪಾಧ್ಯಕ್ಷರಾಗಿ ಕೆಂಚರಂಗಯ್ಯ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್. ನಾಗೇಶ್ ತಿಳಿಸಿದರು.

ನೂತನ ಅಧ್ಯಕ್ಷ ಮಂಜುಳಾ ಗಂಗರಾಜು ಮಾತನಾಡಿ, ಸಂಘದ ಸದಸ್ಯರೆಲ್ಲರೂ ಮತ್ತು ನಿರ್ದೇಶಕರೆಲ್ಲರ ಸಹಕಾರದಿಂದ ಸಂಘವನ್ನು ಲಾಭದತ್ತ ಮುನ್ನಡೆಸಲು ಪ್ರಯತ್ನಿಸುತ್ತೇನೆ. ಮರಳಗೊಂಡಲ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೂತನ ಕಟ್ಟಡ ಕಟ್ಟಿಸಲು ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ಅವರಲ್ಲಿ ಮನವಿ ಮಾಡಲಾಗುವುದು ಎಂದರು.

ಉಪಾಧ್ಯಕ್ಷ ಕೆಂಚರಂಗಯ್ಯ ಮಾತನಾಡಿ, ಸಹಕಾರ ಸಂಘದ ಆಶಯದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಕೊಡಿಸಿಕೊಡಲು ದುಡಿಯುತ್ತೇನೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಅವರ ಸಹಕಾರ ಪಡೆದು ಸಂಘದ ಬೆಳವಣಿಗೆಗೆ ಒಗ್ಗೂಡಿ ದುಡಿಯುತ್ತೇವೆ ಎಂದರು.

ಸಂಘದ ಕಾರ್ಯದರ್ಶಿ ನಾಗರಾಜು, ನಿರ್ದೇಶಕರಾದ ಶಿವಕುಮಾರ್, ಮುತ್ತುರಾಜು, ಶಿವಣ್ಣ, ಗಂಗಾ ಹನುಮಯ್ಯ, ಧನಂಜಯ, ಶಂಕರಪ್ಪ, ಶೋಭಾ ರಾಣಿ , ತಿಮ್ಮರಾಯಪ್ಪ, ಕೆಂಚಪ್ಪ, ಮುನಿರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT