ಮಾಗಡಿ (ರಾಮನಗರ): ಶಾಸಕ ಎಚ್.ಸಿ. ಬಾಲಕೃಷ್ಣ ಅವರು, ಸೋಮವಾರ ಚಾಮರಾಜನಗರದ ಮಲೆ ಮಾದೇಶ್ವರ ಬೆಟ್ಟಕ್ಕೆ ಸಂಕ್ರಾಂತಿ ದಿನವಾದ ಸೋಮವಾರ ಪಾದಯಾತ್ರೆ ಕೈಗೊಂಡು ಹರಕೆ ತೀರಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಾಲಕೃಷ್ಣ ಅವರ ಗೆಲುವಿಗಾಗಿ ಕಾರ್ಯಕರ್ತರು ಹರಕೆ ಹೊತ್ತಿದ್ದರು. ಅದರಂತೆ, ಶಾಸಕರು, ಪಾದಯಾತ್ರೆ ಮಾಡಿ ಮಾದೇಶ್ವರನ ದರ್ಶನ ಪಡೆದು ಹರಕೆ ತೀರಿಸಿದ್ದಾರೆ ಎಂದು ಶಾಸಕರ ಆಪ್ತರು ತಿಳಿಸಿದ್ದಾರೆ.