ಮಾಗಡಿ: ತಾಲ್ಲೂಕಿನ ತಟವಾಳು ಗ್ರಾಮದ ರೈತ ಶೇಖರ್ ಅವರ ಜಮೀನಿನಲ್ಲಿ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ರಾಗಿ ತಳಿ ಕ್ಷೇತ್ರೊತ್ಸವ ಹಮ್ಮಿಕೊಂಡಿತ್ತು.

ತಡವಾದ ಮುಂಗಾರಿಗೆ ಮತ್ತು ಖುಷ್ಕಿ ಬೇಸಾಯಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅಲ್ಪಾವಧಿ ಕೆಎಂಆರ್ 316 ರಾಗಿ ತಳಿ ಸೂಕ್ತ ಎಂದು ಕೆವಿಕೆ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಪ್ರಮೋದ್ ಜಿ. ಹೇಳಿದರು.

ಪೂರ್ವ ಮುಂಗಾರು ಅವಧಿಯಲ್ಲಿ (ಜೂನ್-ಜುಲೈ) ಬೆಳೆದ ಅಲಸಂದೆ, ಹೆಸರು, ಉದ್ದು ಅಥವಾ ಎಳ್ಳು ಕಟಾವು ಆದ ನಂತರ ಅಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಬಿತ್ತನೆ ಮಾಡಲು ಈ ತಳಿ ಸೂಕ್ತ. 100 ರಿಂದ 105 ದಿನಕ್ಕೆ ಕಟಾವಿಗೆ ಬರುತ್ತದೆ. ಎಕರೆಗೆ 12-14 ಕ್ವಿಂಟಲ್ ಮತ್ತು ನೀರಾವರಿಯಲ್ಲಿ 18-20ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ತಟವಾಳು ಮತ್ತು ಸುತ್ತಲಿನ ಗ್ರಾಮದ ರೈತರು ಮತ್ತು ಕೆ.ವಿಕೆ ವಿಜ್ಞಾನಿಗಳಾದ ಡಾ.ರಾಜೇಂದ್ರ ಪ್ರಸಾದ್ ಬಿ.ಎಸ್., ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.