ಬುಧವಾರ, ಆಗಸ್ಟ್ 10, 2022
24 °C

ರಾಮನಗರ | ಕಲ್ಯಾಣಿಯಲ್ಲಿ ತಾಯಿ–ಮಗಳ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ಪುರಸಭೆ ಪಂಪ್‌ ಹೌಸ್‌ ಎದುರಿನಲ್ಲಿರುವ ಕಲ್ಯಾಣಿಯಲ್ಲಿ ಶನಿವಾರ ತಾಯಿ–ಮಗಳ ಶವ ಪತ್ತೆ ಆಗಿದೆ.

ಪಟ್ಟಣದ ಗದ್ದೆಬಯಲು ಪ್ರದೇಶದ ಮಂಗಳಮ್ಮ(37) ಹಾಗೂ ಅವರ ಪುತ್ರಿ ಸನ್ನಿಧಿ (7) ಮೃತರು. ಕಲ್ಯಾಣಿ ಪಕ್ಕದಲ್ಲಿ ಸ್ಕೂಟರ್ ಮಂಗಳಮ್ಮ ಅವರ ದ್ವಿಚಕ್ರ ವಾಹನ ಪತ್ತೆಯಾಗಿದೆ.   

‘ಬೆಳಿಗ್ಗೆ 6 ಗಂಟೆ ಸುಮಾರಿಗೆ ಪತ್ನಿಯು ಪುತ್ರಿ ಜೊತೆಗೂಡಿ ತರಕಾರಿ–ಹಾಲು ತರಲು ಮಾರುಕಟ್ಟೆಗೆ ಹೋಗಿದ್ದರು. ನಂತರ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ಆಕೆಯ ಪತಿ ರಂಗೇಗೌಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. 

ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ಪೊಲೀಸರು ಕಲ್ಯಾಣಿಯಲ್ಲಿದ್ದ ಶವಗಳನ್ನು ಹೊರತೆಗೆದರು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಸಂಜೆ ಅಂತ್ಯಕ್ರಿಯೆ ನೆರವೇರಿತು. ಮಾಗಡಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.