ರಾಮನಗರ: ಸ್ಥಳೀಯ ಯೋಜನಾ ಪ್ರದೇಶಕ್ಕೆ ಸಂಬಂಧಿಸಿದಂತೆ, ಮಹಾ ಯೋಜನೆ ತಯಾರಿಕೆಗೆ ಸಂಬಂಧಿಸಿದಂತೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಗೆ ಒಳಪಡುವ 10 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ, ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಸಭೆ ನಡೆಯಿತು.

ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ 37 ಗ್ರಾಮಗಳಿಗೆ ಸಂಬಂಧಿಸಿದಂತೆ ಪ್ರಸ್ತುತವಿರುವ ವಲಯ ನಿಯಮಾವಳಿಯಂತೆ ಮಹಾಯೋಜನೆಯ ನಕ್ಷೆಗಳನ್ನು ತಯಾರಿಸಲಾಗಿದೆ. ಸದರಿ ನಕ್ಷೆಗಳಲ್ಲಿ ಯಾವುದೇ ಬದಲಾವಣೆ, ವಸತಿ, ವಾಣಿಜ್ಯ, ಕೈಗಾರಿಕೆ ಮತ್ತು ಗ್ರಾಮ ಠಾಣಾ ವಿಸ್ತರಣೆಗೆ ಸಂಬಂಧಿಸಿದ ಮಾಹಿತಿ, ಸಲಹೆ– ಸೂಚನೆ ಕುರಿತು ಚರ್ಚೆಯಾಯಿತು.

ಸಭೆಯಲ್ಲಿ ಭಾಗವಹಿಸಿದ್ದವರಿಗೆ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಪ್ರಸ್ತುತ ವಲಯ ನಿಯಮಾವಳಿಯ ನಕ್ಷೆಗಳನ್ನು ನೀಡಲಾಯಿತು. ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಯೋಜನಾ ಪ್ರದೇಶದಲ್ಲಿರುವ ಭೂಮಿಯ ಬಳಕೆಯ ಲಭ್ಯತೆ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ಯೋಜನಾ ಪ್ರದೇಶದಲ್ಲಿ ಮುಂಬರುವ ವಸತಿ, ವಾಣಿಜ್ಯ, ಕೈಗಾರಿಕೆ ಮತ್ತು ಗ್ರಾಮಠಾಣಗೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನು ನೀಡುವಂತೆ ಕೋರಲಾಯಿತು.

‘ಇಲಾಖೆಯಿಂದ ಮಾಹಿತಿ’: ‘ರಾಮನಗರ ನಗರಾಭಿವೃದ್ದಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಬಿಳಗುಂಬ, ಹರೀಸಂದ್ರ, ವಿಭೂತಿಕೆರೆ, ಹುಲಿಕೆರೆ ಗುನ್ನೂರು, ಕೈಲಾಂಚ, ಕೂಟಗಲ್, ಶ್ಯಾನುಭೋಗನಹಳ್ಳಿ, ದೊಡ್ಡಗಂಗವಾಡಿ, ಜಾಲಮಂಗಲ ಅಕ್ಕೂರು ಗ್ರಾಮ ಪಂಚಾಯಿತಿಗಳ 37 ಗ್ರಾಮಗಳು ಒಳಪಡಲಿವೆ. ಬಡಾವಣೆಗಳ ನಿರ್ಮಾಣದ ಸಂದರ್ಭದಲ್ಲಿ ಆ ಪ್ರದೇಶ ಹಳದಿ ಅಥವಾ ಹಸಿರು ವಲಯದಲ್ಲಿರುವ ಬಗ್ಗೆ ಮಾಹಿತಿ, ಪರವಾನಗಿ, ಅಭಿವೃದ್ದಿ ಕಾರ್ಯಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ನಗರಾಭಿವೃದ್ದಿ ಇಲಾಖೆ ವತಿಯಿಂದ ಸಭೆಯಲ್ಲಿ ಮಾಹಿತಿ ನೀಡಲಾಯಿತು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ತಿಳಿಸಿದರು.

ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‍ಕುಮಾರ್, ಆಯುಕ್ತ ಶಿವನಂಕಾರಿ ಗೌಡ, ನಿರ್ದೇಶಕರಾದ ಪರ್ವೀಜ್, ಪ್ರವೀಣ್ ಎಸ್., ಶ್ರೀನಿವಾಸ್, ಮುತ್ತುರಾಜು, ವಿ.ಕೆ. ಶ್ರೀದೇವಿ, ಪಂಚಾತಿಗಳ ಅಧ್ಯಕ್ಷರಾದ ಸುನೀತ್, ಗಿರೀಶ್, ರತ್ನಮ್ಮ, ನಂದಿನಿ ಕೆ.ಎನ್, ಕೆಂಪಯ್ಯ ಸಿ.ಎಸ್, ಬಿ.ಆರ್. ಮಂಜುಳ, ನಗರಸಭೆ ಪೌರಾಯುಕ್ತ ಜಯಣ, ನಗರ ಯೋಜನಾ ಸದಸ್ಯರಾದ ನಿಸರ್ಗ ಕೆ. ಹಾಗೂ ಪಿಡಿಒಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.