ಮಾಗಡಿ: ನಾವು ಹುಟ್ಟಿದ ಜಾತಿಯ ಹೆಸರಿನಲ್ಲೇ ಜನಗಣತಿ ಮಾಡಬೇಕು. ಜಾತಿ ಜನಗಣತಿಯಲ್ಲಿ ಮಾದಿಗ ಜನಾಂಗವೆಂದೇ ನಮೂದಿಸುವ ಕೆಲಸ ಮಾಡಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದುರಾಯನಹಳ್ಳಿ ಕೃಷ್ಣ ಮನವಿ ಮಾಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಾದಿಗ ಜನಾಂಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಿಗ ಜನಾಂಗ ಹೆಚ್ಚು ಇದ್ದು, ಈಗ ಮತ್ತೆ ನಾಗಮೋಹನ ದಾಸ್ ನೇತೃತ್ವದಲ್ಲಿ ಎಸ್ಸಿ/ಎಸ್ಟಿ ಜನಾಂಗದ ಜಾತಿ ಜನಗಣತಿಯನ್ನು ಮೇ ಮೊದಲ ವಾರದಿಂದ ಮಾಡಲಾಗುತ್ತಿದೆ. ಹಾಗಾಗಿ ಜನಗಣತಿಗೆ ಬಂದಾಗ ನಮ್ಮ ಜಾತಿಯ ಹೆಸರನ್ನೇ ಹೇಳಬೇಕು. ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ನಮೂದಿಸಬಾರದು. ನಮ್ಮ ಜಾತಿಯ ಹೆಸರನ್ನು ನಮೂದಿಸಿದಾಗ ಮಾತ್ರ ನಮಗೆ ಸಿಗಬೇಕಾದ ಮೀಸಲಾತಿ ಸಿಗುತ್ತದೆ ಎಂದರು.

ಎಸ್ಸಿ/ಎಸ್ಟಿ ಜನಾಂಗದಲ್ಲಿ 101 ಜಾತಿಗಳಿವೆ. ಹಾಗಾಗಿ ನಮ್ಮ ಜಾತಿಯನ್ನೇ ನಮೂದಿಸಿ ಮೀಸಲಾತಿ ಪಡೆಯೋಣ.

ತಾ.ಪಂ.ಮಾಜಿ ಸದಸ್ಯ ಮಾಡಬಾಳ್ ಜಯರಾಂ, ನರಸಿಂಹಮೂರ್ತಿ, ವಿಜಿದೊಡ್ಡಿ ಲಕ್ಷಣ್, ನರಸಿಂಹಮೂರ್ತಿ, ರಮೇಶ್, ಎಲ್.ಎನ್. ಸ್ವಾಮಿ, ಜೀವಿಕ ಗಂಗನಮಯ್ಯ, ಶ್ರೀನಿವಾಸ್, ತಿಪ್ಪಸಂದ್ರ ಹರೀಶ್, ಶಿವಲಿಂಗಯ್ಯ ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರುಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.