ಭಾನುವಾರ, ಜೂನ್ 26, 2022
21 °C

ರಾಮನಗರ: ಮಿನಿ ವಿಧಾನಸೌಧದ ಮೇಲ್ಭಾಗ ಕೆಳ ಮಟ್ಟದಲ್ಲಿ ಹಾರಾಡಿದ ರಾಷ್ಟ್ರಧ್ವಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನಗರದ ಮಿನಿ ವಿಧಾನಸೌಧದ ಮೇಲ್ಭಾಗ ಶನಿವಾರ ರಾಷ್ಟ್ರಧ್ವಜವು ಕೆಳಮಟ್ಟದಲ್ಲಿ ಹಾರಾಡಿದ್ದು, ಧ್ವಜಕ್ಕೆ ಅಪಮಾನ ಮಾಡಿದಂತೆ ಇತ್ತು.

ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ, ತಹಶೀಲ್ದಾರ್ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಸೇರಿ ಹಲವು ಪ್ರಮಖ ಕಚೇರಿಗಳಿವೆ. ಹೆದ್ದಾರಿ ಪಕ್ಕದಲ್ಲೇ ಈ ಕಟ್ಟಡವಿದ್ದು, ಸಾರ್ವಜನಿಕರಿಗೆ ಸದಾ ಕಾಣಿಸುತ್ತಿರುತ್ತದೆ. ಹೀಗಿದ್ದೂ ಕಳೆದ ಕೆಲವು ದಿನದಿಂದ ಧ್ವಜವು ಕೆಳ ಮಟ್ಟದಲ್ಲೇ ಹಾರಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಮಾಧ್ಯಮಗಳಿಂದ ಮಾಹಿತಿ ಹೋಗುತ್ತಲೇ ಅಧಿಕಾರಿಗಳು ಎಚ್ಚೆತ್ತು ಧ್ವಜವನ್ನು ಎತ್ತರಕ್ಕೆ ಹಾರಿಸಿದರು. ಕಾರಣ ಕೇಳಿದ್ದಕ್ಕೆ ‘ಮಾರಿಷಸ್‌ ಪ್ರಧಾನಿ ತೀರಿಕೊಂಡಿದ್ದಾರೆ. ಹೀಗಾಗಿ ಸರ್ಕಾರವೇ ಆದೇಶ ನೀಡಿದೆ’ ಎಂಬ ಉತ್ತರವೂ ಬಂತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು