ಹಾರೋಹಳ್ಳಿ: ‘ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಬೇಕು’ ಎಂದು ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್ ತಿಳಿಸಿದರು.
ಹಾರೋಹಳ್ಳಿಯ ಕೈಗಾರಿಕಾ ಪ್ರದೇಶದ ಆಂಥಮ್ ಬಯೊ ಸೈನ್ಸ್ ಕಾರ್ಖಾನೆ ವತಿಯಿಂದ ಕಾರ್ಖಾನೆ ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರ, ಕಾಡು, ಸಾಗರ ಇತ್ಯಾದಿಗಳು ಎಂದೆಂದಿಗೂ ಉಳಿಬೇಕು ಎಂದರು.
ನಾವು ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪರಿಸರ ಚಟುವಟಿಕೆಗಳ ಬಗ್ಗೆ ಜಾಗೃತರಾಗುವ ಮೂಲಕ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಆರೋಗ್ಯಕರವಾಗಿರಲು ನಾವೆಲ್ಲರೂ ಶ್ರಮಿಸಬೇಕು. ಒಂದು ಸಸಿ ನೆಡುವುದರಿಂದ ಆಮ್ಲಜನಕ ಕೊರತೆ ನೀಗಿಸಬಹುದು ಎಂದರು.
ಪರಿಸರ ಉಪ ಅಧಿಕಾರಿ ಮೀನಾಕ್ಷಿ, ಆಂಥಮ್ ಬಯೋಸೈನ್ಸ್ ಕಾರ್ಖಾನೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಕೆ.ಸಿ, ಸೈಟ್ ಮುಖ್ಯಸ್ಥ ರಾಘವೇಂದ್ರ ವೆಂಕಟ, ಕಾರ್ಯದರ್ಶಿ ರಾಮ್ ಕೃಷ್ಣನ್, ವ್ಯವಸ್ಥಾಪಕ ಕಪಿನಿಗೌಡ, ಸಂಪನ್ಮೂಲ ವ್ಯವಸ್ಥಾಪಕ ಸುನೀಲ್, ನಿರ್ವಾಹಕ ಶಂಕರ್, ರಾಮಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.