ರಾಮನಗರ: ‘ರೈತರು ಕೇವಲ ರೈತರಾಗಿ ಉಳಿಯದೆ ಉದ್ಯಮಿಗಳಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮ (ಪಿಎಂಎಫ್ಎಂಇ) ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ’ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ಸಹಯೋಗದಲ್ಲಿ ಗುರುವಾರ ನಡೆದ ಪಿಎಂಎಫ್ಎಂಇ ನಿಯಮಬದ್ಧಗೊಳಿಸುವಿಕೆ ಹಾಗೂ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಅಭಿವೃದ್ಧಿ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೇ 15ರಷ್ಟು ಸಬ್ಸಿಡಿ: ‘2020ರಲ್ಲಿ ಶುರುವಾಗಿರುವ ಯೋಜನೆ 2026ರ ಮಾರ್ಚ್ಗೆ ಅಂತ್ಯಗೊಳ್ಳಿಲಿದೆ. ಯೋಜನೆಯಡಿ ಶೇ 15ರಷ್ಟು ಸಬ್ಸಿಡಿ ಸಿಗಲಿದೆ. ಇದುವರೆಗೆ 6,500 ಮಂದಿ ಫಲಾನುಭವಿಗಳಾಗಿದ್ದು, ಐದು ವರ್ಷಗಳಿಂದ ಸಬ್ಸಿಡಿ ಪಡೆಯುತ್ತಿದ್ದಾರೆ. ಈ ವರ್ಷ 5 ಸಾವಿರ ಫಲಾನುಭವಿಗಳನ್ನು ಗುರುತಿಸುವ ಗುರಿ ಹೊಂದಲಾಗಿದೆ’ ಎಂದರು.

‘ಯೋಜನೆಯಡಿ ಅರ್ಜಿ ಸಲ್ಲಿಸಿದ 15 ದಿನದೊಳಗೆ ಸಾಲ ಮಂಜೂರಾಗಲಿದ್ದು, 5 ತಿಂಗಳಲ್ಲಿ ಸಬ್ಸಿಡಿ ಮಂಜೂರಾಗಲಿದೆ. ಸಂತೆ ಮತ್ತು ಜಾತ್ರೆಗಳಲ್ಲಿ ಮಾರಾಟವಾಗುತ್ತಿದ್ದ ಸುಮಾರು 200 ಬಗೆಯ ಉತ್ಪನ್ನಗಳು ಇಂದು ತಾಲ್ಲೂಕು, ಜಿಲ್ಲೆ, ಅಂತರರಾಜ್ಯ ಮೀರಿ ವಿದೇಶಗಳಿಗೆ ರಫ್ತಾಗುತ್ತಿವೆ’ ಎಂದು ತಿಳಿಸಿದರು.

ಶೇ 96ರಷ್ಟು ಮರುಪಾವತಿ: ‘ಯುವ ರೈತರು ಹಾಗೂ ಮಹಿಳೆಯರು ರೈತೋದ್ಯಮಕ್ಕೆ ಬರಬೇಕು. ಉತ್ಪನ್ನಗಳಿಗೆ ಮಾರುಕಟ್ಟೆಯು ತಾನಾಗೇ ತೆರೆದುಕೊಳ್ಳಲಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದು. ನಮ್ಮಲ್ಲಿ ಶೇ 96ರಷ್ಟು ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ತೀರಿಸುತ್ತಿದ್ದಾರೆ’ ಎಂದು ಹೇಳಿದರು.

‘ಯೋಜನೆ ಕುರಿತು ರೈತರಿಗೆ ಅರಿವು ಮೂಡಿಸಿ ಅರ್ಜಿ ಸಲ್ಲಿಸುವುದಕ್ಕಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು (ಡಿಆರ್ಪಿ) ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಜಿಲ್ಲೆಯಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. ಇದರಿಂದಾಗಿ, ಫಲಾನುಭವಿಗಳ ಸಂಖ್ಯೆಯೂ ಕಡಿಮೆ ಇದೆ. ಡಿಆರ್ಪಿಗಳ ನೇಮಕಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಸಬ್ಸಿಡಿ ಸಾಲವೆಂದರೆ ಬ್ಯಾಂಕಿನವರು ಹತ್ತಿರಕ್ಕೆ ಸೇರಿಸುವುದಿಲ್ಲ. ಏನಾದರೂ ಮಾಹಿತಿ ಕೇಳೋಣವೆಂದರೆ ಅಧಿಕಾರಿಗಳಿಗೆ ಕನ್ನಡ ಬರಲ್ಲ. ಅವರಾಡುವ ಇಂಗ್ಲಿಷ್ ಮತ್ತು ಹಿಂದಿ ನಮಗೆ ಅರ್ಥವಾಗದೆ ವಾಪಸ್ ಬರುತ್ತೇವೆ’ ಎಂದು ಸಂವಾದದಲ್ಲಿ ರೈತರು ಬೇಸರ ಹೊರಹಾಕಿದರು.

ಕೆಪೆಕ್ ತಾಂತ್ರಿಕ ಸಹಾಯಕಿ ಪನ್ನಗ ಯೋಜನೆ ಕುರಿತು ಮಾಹಿತಿ ನೀಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ಕಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎನ್. ಅಂಬಿಕಾ ಮಾತನಾಡಿದರು. ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲ್, ಪದಾಧಿಕಾರಿಗಳು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಉಷಾ, ಕೆಡಿಸಿ ಸದಸ್ಯರು, ರೈತರು, ಮಹಿಳೆಯರು ಹಾಗೂ ಅಧಿಕಾರಿಗಳು ಇದ್ದರು.

ವಿವಿಧ ಕಾರಣಕ್ಕೆ ಪಿಎಂಎಫ್ಎಂಇ ಸಬ್ಸಿಡಿ ಬಿಡುಗಡೆ ವಿಳಂಬವಾಗಿತ್ತು. ಎರಡು ದಿನದ ಹಿಂದೆಯಷ್ಟೇ ಬಾಕಿ ₹25 ಕೋಟಿ ಸಬ್ಸಿಡಿ ಹಣ ಬಿಡುಗಡೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿರುವೆ. ಶೀಘ್ರ ನಿಮ್ಮ ಖಾತೆಗೆ ಹಣ ಬರಲಿದೆ

ಸಿ.ಎನ್. ಶಿವಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪಿಎಂಎಫ್ಎಂಇ ಯೋಜನೆಯಡಿ ಕೇವಲ 80 ಫಲಾನುಭವಿಗಳಿದ್ದಾರೆ. ಈ ಸಂಖ್ಯೆ ಇನ್ನು ಹೆಚ್ಚಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು

ಕೆ. ರಾಜು ಜಿಲ್ಲಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

ಸಕಾಲದಲ್ಲಿ ಸಾಲ ಮತ್ತು ಸಬ್ಸಿಡಿ ಬಿಡುಗಡೆ ಮಾಡಿದರಷ್ಟೇ ಯೋಜನೆಯಿಂದ ರೈತರಿಗೆ ಪ್ರಯೋಜನವಾಗಲಿದೆ. ಇಲ್ಲದಿದ್ದರೆ ಅನುಕೂಲದ ಬದಲು ತೊಂದರೆಯಾಗಲಿದೆ. ವಿಳಂಬಕ್ಕೆ ಆಸ್ಪದವಿಲ್ಲದಂತೆ ಯೋಜನೆ ಅನುಷ್ಠಾನಗೊಳಿಸಿ

ಗಾಣಕಲ್ ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಸಾಲ ಸಬ್ಸಿಡಿ ಬಿಡುಗಡೆ ವಿಳಂಬಕ್ಕೆ ಆಕ್ರೋಶ

ಯೋಜನೆ ಫಲಾನುಭವಿಗಳಿಗೆ ಸಾಲ ಮತ್ತು ಸಬ್ಸಿಡಿ ಬಿಡುಗಡೆ ವಿಳಂಬವಾಗುತ್ತಿರುವ ಕುರಿತು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ಕುಮಾರ್ ‘ದಾಖಲೆಗಳು ಸರಿಯಾಗಿದ್ದರೆ ಅರ್ಜಿ ಸಲ್ಲಿಸಿದ ಎರಡು ತಿಂಗಳೊಳಗೆ ಸಾಲ ಬಿಡುಗಡೆಯಾಗಲಿದೆ. ಸಬ್ಸಿಡಿ ಬಿಡುಗಡೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುತ್ತದೆ’ ಎಂದರು. ಆಗ ಮಹಿಳೆಯೊಬ್ಬರು ‘ಮೂರು ತಿಂಗಳಾದರೂ ಸಾಲ ಬಿಡುಗಡೆಯಾಗಿಲ್ಲ. ವರ್ಷವಾದರೂ ಸಬ್ಸಿಡಿ ಬಂದಿಲ್ಲ. ಬಡ್ಡಿ ಸಮೇತ ಸಾಲ ಕಟ್ಟುತ್ತಿದ್ದೇವೆ. ಹೀಗಾದಾರೆ ಸಬ್ಸಿಡಿ ಕೊಟ್ಟು ಏನು ಪ್ರಯೋಜನ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಹುತೇಕ ರೈತರು ದನಿಗೂಡಿಸಿದರು.

ಶುರುವಾಗದ ತೆಂಗು ಸಂಸ್ಕರಣ ಘಟಕ

ಮಾಗಡಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ತೆಂಗು ಸಂಸ್ಕರಣ ಘಟಕ ಇನ್ನೂ ಕಾರ್ಯಾರಂಭಿಸದ ಕುರಿತು ಸಭೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು. ರೈತ ಮುಖಂಡ ಸಿ. ಪುಟ್ಟಸ್ವಾಮಿ ‘ಘಟಕ ಬಳಕೆಗೆ ರೈತ ಉತ್ಪಾದಕ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ. ಆದರೆ ಮೂರು ವರ್ಷವಾದರೂ ಘಟಕ ಕಾರ್ಯಾರಂಭಿಸಿಲ್ಲ. ಪ್ರತಿ ಸಭೆಯೂ ಭರವಸೆಯಲ್ಲೇ ಮುಗಿಯುತ್ತಿದೆ. ನಿಗಮದ ಅಧ್ಯಕ್ಷರು ಇದಕ್ಕೆ ಪ್ರತಿಕ್ರಿಯಿಸಬೇಕು’ ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ‘ಕೆಲ ಕಾರಣಗಳಿಂದಾಗಿ ಘಟಕ ಆರಂಭ ವಿಳಂಬವಾಗಿದ್ದು 15 ದಿನದೊಳಗೆ ಶುರು ಮಾಡಲಾಗುವುದು’ ಎಂದರು. ಪೂರಕವಾಗಿ ಸ್ಪಂದಿಸಿದ ಕೆಪೆಕ್ ವ್ಯವಸ್ಥಾಪಕ ಶಿವಪ್ರಕಾಶ್ ‘ಘಟಕವನ್ನು ಶೀಘ್ರ ಆರಂಭಿಸಲಾಗುವುದು. ಇದಕ್ಕೆ ನಾನೇ ಗ್ಯಾರಂಟಿ’ ಎಂದು ಭರವಸೆ ನೀಡಿದರು.

ಸಚಿವ ಶಾಸಕ ಅಧಿಕಾರಿಗಳ ಗೈರು

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಗೈರಾಗಿದ್ದರು. ಇದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯವಾಗಿ ಇರಬೇಕಾದವರೇ ಇಲ್ಲದಿರುವುದಾಗ ಸಭೆ ನಡೆಸಿ ಏನು ಪ್ರಯೋಜನ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ದನಿಗೂಡಿಸಿದ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ‘ರೈತರ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.